ಭದ್ರಾವತಿ-ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ವಿರುದ್ಧ ಪ್ರತಿಭಟನೆ

ವಿಜಯ ಸಂಘರ್ಷ 

ಭದ್ರಾವತಿ: ಸಾಗುಮಾಡುತ್ತಿದ್ದ ಬಡ ರೈತರ ಭೂಮಿಯ ದಾಖಲಾತಿಗಳನ್ನು ರದ್ದು ಪಡಿಸಿ ಅಕ್ರಮ ಎಸಗಿರುವ ಕಂದಾಯಾಧಿಕಾರಿಗಳು ಮತ್ತು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಗಳ ವಿರುದ್ಧ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ತಾಲೂಕು ಕಚೇರಿ ಆವರಣದಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.


ತಾಲೂಕಿನ ಹೊಳೆಹೊನ್ನೂರು ಹೋಬಳಿ ಯಡೇಹಳ್ಳಿ ಸರ್ವೇ ನಂ 66 ರಲ್ಲಿ 1960-81 33 ಮಂದಿ ಬಡ ರೈತರಿಗೆ ತಲಾ ಎರಡು ಎಕರೆಯಂತೆ ಮಂಜೂರು ಮಾಡಿ ಕೊಟ್ಟಿದ್ದ ಭೂಮಿ ಯನ್ನು ಸಾಗು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಅರಣ್ಯ ಇಲಾಖೆಯು ಈ ಬಡ ರೈತರ ವಿರುದ್ಧ ಆಗಾಗ್ಗೆ ಅರಣ್ಯ ಭೂಮಿ ಎಂದು ಪೀಡಿಸುತ್ತಾ ಅನೇಕ ಸುಳ್ಳು ಕೇಸು ಗಳನ್ನು ದಾಖಲೆ ಸಿಕೊಂಡು ಹಿಂಸೆ ನೀಡಿದ್ದಲ್ಲದೆ 2024 ರಲ್ಲಿ ಈ ಭೂಮಿ ಯನ್ನು ಕಿತ್ತುಕೊಂಡು ಬಡ ರೈತರನ್ನು ಬೀದಿಗೆ ತಳ್ಳಿರುವುದು ಹೇಯ ಕೃತ್ಯ ವಾಗಿದೆ ಎಂದು ಆರೋಪಿಸಿದರು.


ಬೆಂಗಳೂರು ಪ್ರಾದೇಶಿಕ ಕಚೇರಿಯ ಆಯುಕ್ತರು (ಸಾಗು ಮಾಡುತ್ತಿದ್ದ ಸರ್ವೇ ನಂ 66 ರ ಭೂಮಿಯನ್ನು) ಅರಣ್ಯ ಭೂಮಿ ಎಂದು ಸುಳ್ಳು ದಾಖಲು ಮಾಡಿದ್ದನ್ನು ರದ್ದುಗೊಳಿಸಿ ಈ ರೈತರಿಗೆಲ್ಲಾ ಬದಲಿ ಜಮೀನು ನೀಡಬೇಕೆಂದು ಆದೇಶಿಸಿದ್ದರು. 2010 ರಿಂದ 2020 ರವರೆಗೆ ಪ್ರಕರಣವು ಇಂದಿಗೂ ಅಂತಿಮ ಘಟ್ಟ ತಲುಪದೇ ಬಡ ರೈತರಿಗೆ ಭೂಮಿ ನೀಡದೆ ಸತಾವಣೆ ಮಾಡುತ್ತಿದ್ದಾರೆ. ಇದರ ಮಧ್ಯೆ ಕಂದಾಯ ಇಲಾಖೆ ಅಧಿಕಾರಿ ಗಳು ಮತ್ತು ಅರಣ್ಯ ಇಲಾಖಾಧಿ ಕಾರಿಗಳು ಒಗ್ಗೂಡಿ ಇದೇ ಸರ್ವೇ ನಂ 66 ಅಕ್ರಮವಾಗಿ 18 ಎಕರೆ ಭೂಮಿ ಯನ್ನು ಖಾಸಗೀ ವ್ಯಕ್ತಿಗಳಿಗೆ ಅಕ್ರಮ ವಾಗಿ ಖಾತೆ ಬದಲಾವಣೆ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದಾ ರೆಂದು ದೂರಿದರು.


ಈ ಅಕ್ರಮ ಎಸಗಿರುವ ಸಂಬಂಧಿತ ಕಂದಾಯ ಇಲಾಖೆ ಮತ್ತು ಮಾವಿನ ಕಟ್ಟೆಯ ಅರಣ್ಯಾಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿ ಸಬೇಕೆಂದು ಮುಖ್ಯ ಮಂತ್ರಿಗಳಿಗೆ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ತಹಸೀಲ್ದಾರ್ ಮೂಲಕ ಮನವಿ ಅರ್ಪಿಸಿದರು. 


ಪ್ರತಿಭಟನೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಕುಮಾರ್, ಶ್ರೀನಿವಾಸ್, ಮಂಜಮ್ಮ ಆಶಾ, ಪವಿತ್ರ,ಯೋಗೇಂದ್ರಪ್ಪ, ಸಂಗಪ್ಪ, ನಾಗರತ್ನಮ್ಮ, ಸೀನಪ್ಪ. ಎಂ.ಪಿ.ರಾಜು, ನಂಜುಂಡಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು