ಭದ್ರಾವತಿ-ನಾಳೆ ಗೊಂದಿ ಆಶ್ರಮದಲ್ಲಿ ಜಾನಪದ ಸಮ್ಮೇಳನ

ವಿಜಯ ಸಂಘರ್ಷ ನ್ಯೂಸ್ 

ಭದ್ರಾವತಿ: ತಾಲೂಕಿನ ಜಾನಪದ ಪರಿಷತ್ತಿನ ಹಿರಿಯೂರು ಹೋಬಳಿ ಘಟಕವು ಇದೇ ಪ್ರಥಮ ಬಾರಿಗೆ ಜಾನಪದ ಸಮ್ಮೇಳನ ಹಾಗೂ ಜಾನಪದ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮಾ: 16 ರ ನಾಳೆ ಗೊಂದಿ ಸಾಧಕಾಶ್ರಮದಲ್ಲಿ ಹಮ್ಮಿಕೊಂಡಿದೆ.


ಸಮ್ಮೇಳನಾಧ್ಯಕ್ಷರಾಗಿ ಕರ್ನಾಟಕ ಅಂದ್ರ ಮಹಾರಾಷ್ಟ್ರ ತಮಿಳುನಾಡು ರಾಜ್ಯಗಳಲ್ಲಿ ತನ್ನದೇ ಛಾಪು ಮೂಡಿಸಿ ಹೆಸರುಗಳಿಸಿರುವ ನಗರದ ಹೊಸಮನೆ ಯ ಜಾನಪದ ಕಲಾವಿದ ಲಕ್ಷ್ಮಣರಾವ್ ಬೋರತ್ ಅವರನ್ನು ಆಯ್ಕೆ ಮಾಡ ಲಾಗಿದೆ. ಜಿಲ್ಲಾ ಜಾನಪದ ಪರಿಷತ್‌ ಅಧ್ಯಕ್ಷ ಡಿ.ಮಂಜುನಾಥ್ ಆಶಯ ನುಡಿಗಳ ನ್ನಾಡಲಿದ್ದಾರೆ. ಚನ್ನಗಿರಿ ಸಿದ್ಧನ ಮಠದ ಆಧುನಿಕ ಸರ್ವಜ್ಞ ಯುಗಧರ್ಮ ರಾಮಣ್ಣ ಸಮ್ಮೇಳನ ವನ್ನು ಉದ್ಘಾಟಿಸಲಿದ್ದಾರೆ. 


ಶಾಸಕ ಬಿ.ಕೆ.ಸಂಗಮೇಶ್ವರ್ ಹಿರಿಯ ಕಲಾವಿಧರಿಗೆ ಸಿರಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಪರಿಷತ್ ಅಧ್ಯಕ್ಷ ರೇವಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಅನೇಕರು ಭಾಗವಹಿಸಲಿದ್ದಾರೆ.


ಸ್ವಾಗತಿಸಿದ ಅಭಿಮಾನಿಗಳು:


ತಾಲೂಕಿನ ಶ್ರೀ ಪಾಂಡುರಂಗ ಸಾಧಕಾಶ್ರಮದಲ್ಲಿ ಆಯೋಜಿಸಿರುವ ಪ್ರಥಮ ಸರ್ವಾಧ್ಯಕ್ಷರಾಗಿ ಲಕ್ಷ್ಮಣ್‌ ರಾವ್ ಜಾನಪದ ಸಮ್ಮೇಳನಕ್ಕೆ ಆಯ್ಕೆಯಾಗಿರುವ ಬೋರತ್ ಅವರನ್ನು ನಗರದ ಹೊಸಮನೆಯಲ್ಲಿ ರುವ ಅವರ ನಿವಾಸದಲ್ಲಿ ಅದ್ಧೂರಿ ಯಾಗಿ ಅಭಿನಂದಿಸಿ ಸ್ವಾಗತಿಸಲಾಯಿತು.


ತಾಲೂಕು ಅಧ್ಯಕ್ಷ ಎಂ.ಆ‌ರ್. ರೇವಣಪ್ಪ ನೇತೃತ್ವದಲ್ಲಿ ಮುಖಂಡರು ಮತ್ತು ಪದಾಧಿ ಕಾರಿಗಳಾದ ಮೋಹನ್, ಕಮಲಾಕರ್, ಬಿ.ಹೆಚ್. ಪ್ರಶಾಂತ್,ದಿವಾಕರ್.ಜಂಬೂಸ್ವಾಮಿ. ಶಿವರಾಜ್, ಹರೀಶ್, ಭಾರ್ಗವಿ, ಶಶಿಕುಮಾ‌ರ್ ಇನ್ನು ಮುಂತಾದವರು ಸರ್ವಾಧ್ಯಕ್ಷರನ್ನು ಅಭಿನಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು