ಸಹಕಾರ ತತ್ವ ಅರಿತವರಿಗೆ ನಿಮ್ಮ ಮತ ನೀಡಿ: ಗದ್ದೆಹೊಸೂರು ಜಗದೀಶ್

ವಿಜಯ ಸಂಘರ್ಷ 
ಕೆ.ಆರ್.ಪೇಟೆ: ಸಂಘದ ವ್ಯಾಪ್ತಿಗೆ ಬರುವ ಸೇರುದಾರ ಮತದಾರರು ಸಂಘದ ಅಭಿವೃದ್ಧಿಗೆ ಶ್ರಮಿಸುವ ಹಾಗೂ ಸಹಕಾರ ತತ್ವ ಅರಿತವರಿಗೆ ನಿಮ್ಮ ಮತ ನೀಡಿ ಎಂದು ಜೆಡಿಎಸ್ ಮುಖಂಡ ಗದ್ದೆಹೊಸೂರು ಜಗದೀಶ್ ತಿಳಿಸಿದರು.

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಯ ಮಂದಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಕ್ಕೆ ನೂತನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನ ಮಾ: 27ಕ್ಕೆ ನಡೆಯುವ ಚುನಾವಣೆಗೆ ಸಾಲಗಾರ ರಲ್ಲದ ಸಾಮಾನ್ಯ ಕ್ಷೇತ್ರಕ್ಕೆ ಲೋಕೇಶ್ ಎ.ಕೆ ಅವರು ಜೆಡಿಎಸ್ ಮುಖಂಡ ಗದ್ದೆಹೊಸೂರು ಜಗದೀಶ್ ನೇತೃತ್ವ ದಲ್ಲಿ ಹಾಗೂ ಜೆಡಿಎಸ್ - ಬಿಜೆಪಿ ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ಬಳಿಕ ಜೆಡಿಎಸ್ ಮುಖಂಡ ಗದ್ದೆ ಹೊಸೂರು ಜಗದೀಶ್ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಬೆನ್ನೆಲು ಬಾಗಿವೆ. ಹಾಗಾಗಿ ಸೊಸೈಟಿ ವ್ಯಾಪ್ತಿಗೆ ಬರುವ ಸೇರಿದಾರ ಮತದಾರರು ಜಾಗೃತೆಯಿಂದ ಹಣ ಆಮಿಷಕ್ಕೆ ಒಳಗಾಗದೆ ಸಹಕಾರಿ ವ್ಯವಸ್ಥೆ ಮೈಗೂಡಿಸಿ ಕೊಂಡಿರುವ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಿ ನಿಮ್ಮ ಅಮೂಲ್ಯವಾದ ಮತ ನೀಡಬೇಕು ಆಗ ಮಾತ್ರ ಸರಕಾರಿ ಸಂಘಗಳು ಅಭಿವೃದ್ಧಿ ಯಾಗಲು ಸಾಧ್ಯ. ಹಾಗೆ ಸೇವಾ ಮನೋಭಾವನೆಯುಳ್ಳ ಲೋಕೇಶ್ ಎ.ಕೆ ರವರು ಜೆಡಿಎಸ್ ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದಾರೆ ನಿಮ್ಮಅಮೂಲ್ಯ ವಾದ ಮತ ನೀಡಿ ಜಯಶೀಲರಾಗಿ ಮಾಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎ.ಎಸ್ ಲಕ್ಷ್ಮಿನಾರಾಯಣ್, ಗದ್ದೆ ಹೊಸೂರು ದರ್ಶನ್, ಅಲೇನಹಳ್ಳಿ ನಟರಾಜು, ವಿಠಲ, ಶಿವಕುಮಾರ್, ಸಂಪತ್, ಹೇಮಂತ್, ಸಂದೀಪ್, ಅಲೇನಹಳ್ಳಿ ಶಂಕರ್, ಎ.ಕೆ ಕುಮಾರ್,ಶಂಕರ್,ನೀತಿಮಂಗಲ ಮಂಜು, ಸುರೇಂದ್ರ, ರೇವಣ್ಣ, ಆದರ್ಶ ಅಲೇನಹಳ್ಳಿ, ಪಾಪಣ್ಣ, ಸಚಿನ್ ಸೇರಿದಂತೆ ಉಪಸ್ಥಿತರಿದ್ದರು.

*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು