ವಿಜಯ ಸಂಘರ್ಷ
ಭದ್ರಾವತಿ: ಹಳೇನಗರದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ವಾದಿರಾಜ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಉಡುಪಿ ಯ ಶಿರೂರು ಮಠದ ಶ್ರೀಗಳಾದ ಶ್ರೀ ವೇದವರ್ಧನ ಸ್ವಾಮೀಜಿಗಳ ಉಪ ಸ್ಥಿತಿಯಲ್ಲಿ ಶ್ರೀವಾದಿರಾಜ ಸ್ವಾಮಿಗಳ ರಥೋತ್ಸವ ನಡೆಸಲಾಯಿತು.
ಮುಖ್ಯ ಪ್ರಾಣ ದೇವರ ಮೂರ್ತಿಗೆ ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳ, ಶ್ರೀವಾದಿರಾಜ ಸ್ವಾಮಿಗಳ ವೃಂದಾವನಕ್ಕೆ ಭೂತ ರಾಜರಿಗೆ ಶ್ರೀ ವೇದ ವರ್ಧನ ಸ್ವಾಮಿಗಳು ಹಾಲು, ಮೊಸರು, ತುಪ್ಪ, ಜೇನು ತುಪ್ಪಾ, ಹಲವು ಬಗೆಯ ಹಣ್ಣು, ಎಳನೀರು ಗಳಿಂದ ಪಂಚಾಮೃತ ಅಭಿಷೇಕವನ್ನು ಮಾಡಿದರು. ಅಭಿಷೇಕಾ ನಂತರ ದೇವರಿಗೆ ಹಾಗೂ ಉಭಯ ಗುರುಗಳ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಯಿತು.
ಚಂಡೆ ವಾದ್ಯ ತಂಡದೊಂದಿಗೆ ಮುಖ್ಯ ಪ್ರಾಣ ದೇವರ ರಜತ ಮೂರ್ತಿ ಸಹಿತವಾಗಿ ಶ್ರೀರಾಘವೇಂದ್ರ ಸ್ವಾಮಿಗಳ, ಶ್ರೀವಾದಿರಾಜ ಸ್ವಾಮಿಗಳ ಬೆಳ್ಳಿಯ ಬೃಂದಾವನವನ್ನು ರಜತ ಪಲ್ಲಕ್ಕಿಯಲ್ಲಿರಿಸಿ ಶ್ರೀಮಠದ ಪ್ರಾಕಾರ ದಲ್ಲಿ ಪ್ರದಕ್ಷಿಣೆ ಉತ್ಸವ ನಡೆಸಿ ನಂತರ ಮುಖ್ಯ ಪ್ರಾಣ ದೇವರ ರಜತಮೂರ್ತಿ ಸಹಿತವಾಗಿ ಶ್ರೀರಾಘವೇಂದ್ರ ಸ್ವಾಮಿ ಗಳ, ಶ್ರೀವಾದಿರಾಜ ಸ್ವಾಮಿಗಳ ಬೆಳ್ಳಿಯ ಬೃಂದಾವನವನ್ನು ಪುಷ್ಪಾ ಲಂಕೃತ ರಥದಲ್ಲಿರಿಸಿ ರಥ ಪೂಜೆ ನಡೆಸಿ ಅಷ್ಠಾವಧಾನ ಸೇವೆಯಡಿ ರಥದ ಅಷ್ಟದಿಕ್ಕುಗಳಲ್ಲಿಯೂ ಬಲಿ ಪೂಜೆ ಮಾಡಿ, ಮಂಗಳಾರತಿ ನಂತರ ವಾದಿರಾಜ ಗುರು ಸಾರ್ವಭೌಮರಿಗೆ ಗೋವಿಂದಾ, ಗೋವಿಂದಾ ಎನ್ನುತ್ತಾ ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಭಕ್ತಾದಿಗಳು ಶ್ರೀವಾದಿರಾಜ್ ವಿರಚಿತ ಕೃತಿಗಳನ್ನು ಹಾಡುತ್ತಾ ರಥವನ್ನು ಎಳೆದರು. ರಥೋತ್ಸವವು ಬ್ರಾಹ್ಮಣರ ಬೀದಿಯ ಮೂಲಕ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಕ್ಕೆ ತೆರಳುವ ರಥವು ಪುನಃ ಅದೇ ಮಾರ್ಗದಲ್ಲಿ ಶ್ರೀಮಠಕ್ಕೆ ಹಿಂದಿರುಗಿತು.
ಉತ್ಸವ ಮೂರ್ತಿ, ಬೃಂದಾವನವನ್ನು ಪಲ್ಲಕ್ಕಿಯಲ್ಲಿರಿಸಿ ಶ್ರೀರಾಮೆಶ್ವರ ದೇವಾಲಯಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದ ನಂತರ ಶ್ರೀಮಠಕ್ಕೆ ಬಂದು ಪ್ರಾಕಾರ ಉತ್ಸವ ನಡೆಸುವ ಮೂಲಕ ರಥೋತ್ಸವ ಸಂಪನ್ನಗೊಂಡಿತು.
ಶ್ರೀಗಳಿಂದ ಆಸ್ಥಾನ ವಿಠಲ ಶ್ರೀ ನರಸಿಂಹ ದೇವರ ಪೂಜೆ ಉಡುಪಿಯ ಶಿರೂರು ಮಠದ ಶ್ರೀಗಳಾದ ಶ್ರೀವೇದ ವರ್ಧನ ಸ್ವಾಮೀಜಿ ಶಿರೂರು ಮಠದ ಪೂಜಾ ಮೂರ್ತಿಯಾದ ವಿಠಲ ದೇವರ ಸಹಿತ ನರಸಿಂಹ, ಲಕ್ಷ್ಮೀ, ಮುಖ್ಯ ಪ್ರಾಣ ದೇವರ ಆಸ್ಥಾನ ಪೂಜೆಯನ್ನು ನೆರವೇರಿಸಿದರು. ಮಹಾಮಂಗಳಾರತಿ ನಂತರ ಭಕ್ತಾದಿ ಗಳಿಗೆ ತೀರ್ಥ ಪ್ರಸಾದ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಅರ್ಚಕರಾದ ಮಾಧುರಾವ್, ಪಂಡಿತ ಗೋಪಾಲಾ ಚಾರ್, ಶ್ರೀನಿವಾಸಾಚಾರ್, ಶೇಷಗಿರಿ ಆಚಾರ್, ಶ್ರೀಮಠದ ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ 'ಮುರಳೀಧರ ತಂತ್ರಿ, ಕಾರ್ಯದರ್ಶಿ ರಮಾಕಾಂತ, ಸುಮಾ ರಾಘವೇಂದ್ರ, ಶುಭಾ ಗುರುರಾಜ, ಗೋಪಾಲಕೃಷ್ಣ, ಜಯತೀರ್ಥ, ಸುದೀಂದ್ರ, ಶ್ರೀನಿವಾಸ, ಪ್ರಶಾಂತ, ಪ್ರಮೋದ, ನಿತ್ಯಾನಂದ ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.
Tags
ಭದ್ರಾವತಿ ವರದಿ