ವಿಶ್ವ ಅರಣ್ಯ ದಿನದ ಅಂಗವಾಗಿ ಸಸಿ ವಿತರಣೆ : ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ

ವಿಜಯ ಸಂಘರ್ಷ 
ಭದ್ರಾವತಿ: ಸಂವಿಧಾನದ ಆಶಯ ದಂತೆ ಪರಿಸರ, ಕಾಡುಪ್ರಾಣಿಗಳು ಮತ್ತು ಪಕ್ಷಿಗಳ ಬಗ್ಗೆ ಕಾಳಜಿ ತೋರಿಸುವುದು ನಮ್ಮ ಆದ್ಯ ಕರ್ತವ್ಯ ವಾಗಿದೆ ಎಂದು ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಷ್ ರೆಡ್ಡಿ ಹೇಳಿದರು.

ಅವರು ಶುಕ್ರವಾರ ವಿಶ್ವ ಅರಣ್ಯ ದಿನದ ಅಂಗವಾಗಿ ಮತ್ತು 'ಹಸಿರೀಕರಣ ದೆಡೆಗೆ' ಅಂಗವಾಗಿ ಸೈಲ್-ವಿಐಎಸ್ಎಲ್ ವತಿಯಿಂದ 600 ಸಸಿಗಳನ್ನು ವಿತರಿಸಿ ಮಾತನಾಡಿದರು.

 ವಿಐಎಸ್‌ಎಲ್ ಕಾರ್ಖಾನೆಯು ಸಸಿಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ. ಇದು ಮುಂದಿನ ದಿನಗಳಲ್ಲಿ ನಗರವನ್ನು ಹಸಿರೀ ಕರಣ ವಾಗಿಸಿ ಆ ಮೂಲಕ ನಗರದ ಸೌಂದರ್ಯ ಹೆಚ್ಚಿಸುವುದರೊಂದಿಗೆ ಸುಂದರ ವಾಗಿಸುವ ವಿಶ್ವಾಸವಿದೆ ಎಂದರು.

ವಿಐಎಸ್ಎಲ್ ನಿರ್ದೇಶಕ ಬಿ.ಎಲ್‌. ಚಂದ್ವಾನಿ ಮಾತನಾಡಿ, ಅರಣ್ಯ ಕರಣ ದೊಂದಿಗೆ, ಹೊಸ ಸಸಿಗಳನ್ನು ನೆಡುವು ದರಿಂದ ಅರಣ್ಯ ನಾಶವನ್ನು ತಡೆಯ ಬಹುದು ಮತ್ತು ಪ್ರಸ್ತುತ ಇರುವ ಮರ ಗಳನ್ನು ರಕ್ಷಣೆ ಮಾಡುವುದು ಮತ್ತು ಸಸಿಗಳನ್ನು ಬೆಳೆಸುವುದು ಪರಿಸರ ಸ್ನೇಹಿಯ ಒಂದು ಸಂಸ್ಕೃತಿಯಾಗ ಬೇಕು. ಆಗ ಮಾತ್ರ ನಮ್ಮ ಪ್ರಯತ್ನ ದಲ್ಲಿ ಯಶಸ್ವಿಯಾಗಬಹುದು ಎಂದರು.

ಮೈಸೂರು ಕಾಗದ ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ಶ್ರೀನಿವಾಸ್ ಮತ್ತು ನಗರಾಡಳಿತಾಧಿಕಾರಿ ಸತೀಶ್, ನಗರಸಭೆ ಆಯುಕ್ತ ಪ್ರಕಾಶ್ ಚನ್ನಪ್ಪ ನವರ್ ಮತ್ತು ಪರಿಸರ ಅಧಿಕಾರಿ ಪ್ರಭಾಕರ್ ಸಸಿಗಳನ್ನು ಸ್ವೀಕರಿಸಿದರು.

ವಿಐಎಸ್‌ಎಲ್‌ ಕಾರ್ಖಾನೆಯ ಮುಖ್ಯ ಮಹಾಪ್ರಬಂಧಕ ಕೆ.ಎಸ್. ಸುರೇಶ್ ಮಹಾಪ್ರಬಂಧಕ ಎಲ್. ಪ್ರವೀಣ್ ಕುಮಾರ್, ಎಂ.ಸುಬ್ಬರಾವ್, ಸಹಾಯಕ ಮಹಾಪ್ರಬಂಧಕ ವಿಕಾಸ್ ಬಸೇರ್, ಸೆಕ್ಯುರಿಟಿ ಸೂಪರ್‌ವೈಸ‌ರ್ ರೇವಣಪ್ಪ ಮೂಡಿ, ರಿಜ್ವಾನ್ ಬೇಗ್, ದಿವಾಕರ, ಸಂತೋಷ್, ಜಗದೀಶ್ ಬಡಿಗೇರ್, ಹೇಮಂತ್ ಮತ್ತಿತರಿದ್ದರು. ಸಸಿಗಳ ಪೋಷಣೆ ಮತ್ತು ವಿತರಣೆಯ ಕಾರ್ಯಕ್ರಮವನ್ನು ವಿಐಎಸ್ ಎಲ್  ಸಹಕಾರದೊಂದಿಗೆ ಕೈಗೊಂಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು