ವಿಜಯ ಸಂಘರ್ಷ
ಸಿನಿಮಾ ಎಂಬುದು ಇತರ ಸಂಸ್ಕೃತಿಗಳ ಜನರೊಂದಿಗೆ ಸಂಪರ್ಕಿಸಲು ಇರುವ ಒಂದು ಸಾಧನವಾಗಿದೆ, ಸಮಾಜದ ಮೇಲೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರೀತಿಯನ್ನು ಸಹ ಪ್ರಭಾವ ಬೀರುತ್ತದೆ,
ಹೌದು! ಸಿನಿಮಾ ಬಹಳ ಹಿಂದಿನಿಂದಲೂ ಮನೋರಂಜನ ಮಾಧ್ಯಮವಾಗಿದೆ,
ಆದರೆ ಈಗ ಪ್ರಸ್ತುತ ಕಾಲಘಟ್ಟದಲ್ಲಿ ಮೂಡಿ ಬರುತ್ತಿರುವ ಚಿತ್ರಗಳು ಉದ್ಯಮದ ಒಂದು ಭಾಗವಾಗಿ ಬಿಟ್ಟಿದೆ,
ದಣಿದ ಮನಸ್ಸಿಗೆ ವಿರಾಮ ನೀಡಲು ಚಲನಚಿತ್ರವು ಸಹಾಯ ಮಾಡುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ಜನರ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತದೆ,
ಸುತ್ತಮುತ್ತಲಿನ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತಾ ಮತ್ತು ಅವುಗಳು ಸಾಮಾನ್ಯ ಜನರಿಗೆ ಗೊಳಿಸುತ್ತದೆ, ಇವೆಲ್ಲವನ್ನು ಒಳಗೊಂಡಾಗ ಯಾವ ರೀತಿಯಾದ ಸಿನಿಮಾ ಮತ್ತು ಸಮಾಜಕ್ಕೆ ಯುವಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ಮುಖ್ಯವೆಂಬುದು ಯಕ್ಷಪ್ರಶ್ನೆಯಾಗುತ್ತದೆ, ಈಗ ಯಾವುದೇ ಭೇದ ಭಾವಗಳಿಲ್ಲದೆ ಎಲ್ಲರೂ ಕುಳಿತು ನೋಡುವ ಸಿನಿಮಾಗಳು ಕೊಂಚ ನಕಾರಾತ್ಮಕತೆಯಿಂದ ಅನುಕೂಲ ಕರವಾಗಿ ಕಾಣಲು ಗಮನ ಹರಿಸಬೇಕಿದೆ,
ಸಾಮಾನ್ಯವಾಗಿ ಸಿನಿಮಾ ಎಂದು ವಿವಿಧ ವಿಷಯಗಳನ್ನು ಅನುಕರಣೆ ಮಾಡುತ್ತದೆ ಕೆಲವು ಚಿತ್ರಗಳು ಅಮೂಲ್ಯವಾದದ್ದನ್ನು ಕಲಿಸದ ಕಾರಣ ಇದು ಸಮಯ ಮತ್ತು ಹಣದ ವ್ಯರ್ಥ ಎಂದು ಪರಿಗಣಿಸಲಾಗುತ್ತದೆ,
ಬಹು ಮುಖ್ಯವಾಗಿ ಉದಾಹರಣೆಯ ಮೂಲಕ ಹೇಳುವುದಾದರೆ ಬಂಗಾರದ ಮನುಷ್ಯ ಪೃಥ್ವಿ ಇಂತಹ ಅನೇಕ ಚಿತ್ರಗಳು ನೋಡಿದರೆ ಪ್ರೋತ್ಸಾಹದಾಯಕವಾಗಿ ಜೀವನದ ಗುರಿಯ ಕಡೆ ಗಮನ ಹರಿಸಲು ಅನುಕೂಲವಾಗುತ್ತದೆ.
ಮತ್ತೆ ತರ ಚಿತ್ರಗಳಾದ ಮಹಿಳಾ ಅತ್ಯಾಚಾರ ಲೈಂಗಿಕ ಕರ್ಕೊಳ ಭ್ರಷ್ಟಾಚಾರ ವರದಕ್ಷಿಣೆ ಬಾಲ್ಯ ವಿವಾಹ ಬಾಲಕಾರ್ಮಿಕ ಪದ್ಧತಿ ಇಂತಹ ಅದೆಷ್ಟೂ ವಿಷಯದ ಕುರಿತು ಮೂಡಿರುವ ಚಿತ್ರಗಳಿಂದ ಜನರು ಇಂತಹ ವಿಷಯಗಳಿಗೆ ಪ್ರಭಾವಕ್ಕೆ ಒಳಗಾಗಿದ್ದಾರೆ ಎನ್ನಬಹುದು.
ಇದು ಯುವ ಮನಸುಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ, ಇದರಿಂದ ವಿದ್ಯಾರ್ಥಿಗಳ ಜೀವನ ಶೈಲಿ ಮತ್ತು ಮನಸ್ಸಿನ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತದೆ,
ವಿಭಿನ್ನ ಜನರು ಮತ್ತು ಜೀವನವನ್ನು ಹೇಗೆ ತಮ್ಮ ಜೀವನ ನಡೆಸುತ್ತಾರೆ ಎಂಬುದರ ಕುರಿತು ಜ್ಞಾನವನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ, ಇಂತಹ ಸಿನಿಮಾಗಳು ಮತ್ತಷ್ಟು ಹೆಚ್ಚಬೇಕು, ಅದೆಷ್ಟು ಚಲನಚಿತ್ರ ಗಳಲ್ಲಿ ನಿನ್ನ ಘಟನೆಗಳು ನಮ್ಮ ಜೀವನದಲ್ಲಿ ನಡೆದಾಗ ರಕ್ಷಿಸಿಕೊಳ್ಳುವ ಸಾಮರ್ಥ್ಯ ಮೂಡುತ್ತದೆ, ಸಿನಿಮಾಗಳು ಜನರನ್ನು ದೆಸಲಿಗರನ್ನಾಗಿ ಮಾಡುತ್ತಿದೆ, ಏಕೆಂದರೆ ಅದರ ಸಲುವಾಗಿ ಇತ್ತೀಚಿನ ಚಲನ ಚಿತ್ರವನ್ನು ವೀಕ್ಷಿಸಲು ಪ್ರತಿವಾರಂತದಲ್ಲಿ ಚಿತ್ರರಂಗ ಮಂದಿರಕ್ಕೆ ಸೇರುವುದನ್ನು ನೀವು ನೋಡಿರಬಹುದು,
ಇದಕ್ಕೆ ಯುವಜನತೆಯು ಕೂಡ ಒಳಗೊಂಡಿರುತ್ತಾರೆ,ನಿರ್ದೇಶಕರು ಕೇವಲ ಸಮಾಜವನ್ನು ಈ ನಿಟ್ಟಿನಲ್ಲಿ ದೃಷ್ಟಿಯಿಂದ ಆಲೋಚಿಸದೆ ಯುವ ಸಮಾಜದ ಮೇಲೆ ಗಮನವಹಿಸಿ ಚಲನಚಿತ್ರಗಳ ಮೂಲಕ ಅರಿವು ಮೂಡಿಸಬೇಕಿದೆ, ತುರ್ತು ಸಂದರ್ಭ ಗಳಿಗೆ ಸುಧಾರಿಸುವಂತೆ ಸಹಾಯ ಮಾಡುವ ಚಿತ್ರಗಳು ನೆಲೆ ಕಾಣಬೇಕಿದೆ.
✍️ಭಾರ್ಗವಿ, ಜಿ, ಆರ್
ಕುವೆಂಪು ವಿಶ್ವ ವಿದ್ಯಾಲಯ ಶಂಕರಘಟ್ಟ
ಪತ್ರಿಕೋಧ್ಯಮ ವಿದ್ಯಾರ್ಥಿ,
Nice one
ಪ್ರತ್ಯುತ್ತರಅಳಿಸಿ