ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಹಳೇನಗರದ ಅಂಬೇಡ್ಕರ್
ನಗರದ ಕಾಂತರಾಜ್ ನಿವಾಸದಲ್ಲಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಿ ಬಂದವರ ಅನುಭವ ಹಂಚಿಕೊಳ್ಳುವ ಮತ್ತು ಅವರನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು.
ಶ್ರೀಕಾಂತ್ ಮತ್ತು ಮಾಸ್ಟರ್ ಮಲ್ಲಿಕಾರ್ಜುನ್ ದಂಪತಿಗಳಿಗೆ ಗೌರವಿಸಲಾಯಿತು. ಪ್ರಯಾಗ್ ರಾಜ್‌ಗೆ ಹೋಗಿ ಬಂದ ಅನುಭವವನ್ನು ಹಂಚಿಕೊಂಡು ಅಲ್ಲಿಂದ ತಂದ ಗಂಗಾ ಯಮುನಾ ಸರಸ್ವತಿ ಪವಿತ್ರ ಜಲವನ್ನು ನೆರದಿದ್ದವರಿಗೆ ಪ್ರೋಕ್ಷಣೆ ಮಾಡಿ ನಂತರ ತೀರ್ಥ ಹಂಚಿಕೆ ಮಾಡಲಾಯಿತು.
ನಿವೃತ್ತ ಡಿವೈಎಸ್‌ಪಿ ವರದರಾಜು, ರಮೇಶ್, ರವಿ, ಕಾಂತರಾಜ್, ಉಪೇಂದ್ರ, ಮಣಿ, ಮಾಲತಿ, ನರಸಿಂಹಮೂರ್ತಿ, ವಿಜಯಮ್ಮ ಮುಂತಾದವರಿದ್ದರು. ಕಡೆಯಲ್ಲಿ ಪ್ರಸಾದ ವಿನಿಯೋಗ ಮಾಡಲಾಯಿತು. ಇದೇ ಸಂದರ್ಭದಲ್ಲಿ ಭಜನೆ ಮತ್ತು ಜಪ ಮಾಡಲಾಯಿತು.
ಪುಷ್ಪಾ ಪ್ರಾರ್ಥಿಸಿದರೆ, ಟಿ.ವೆಂಕಟೇಶ್ ಸ್ವಾಗತಿಸಿದರು. ಆರ್.ಎಸ್.ಎಸ್ ಪ್ರಮುಖ್ ದತ್ತಾತ್ರೇಯ ಪ್ರಾಸ್ತಾವಿಕ ನುಡಿಗಳ ನ್ನಾಡಿದರು. ನರಸಿಂಹಾಚಾರ್ ನಿರೂಪಿಸಿದರು.