ಜಿಎಸ್‌ಟಿ ಅಧಿಕಾರಿಗಳಿಂದ ರೈತರ ಗೋಡೌನ್‌ ಮೇಲೆ ದಾಳಿ

ವಿಜಯ ಸಂಘರ್ಷ 
ಭದ್ರಾವತಿ: ಅರಹತೊಳಲು-ಕೈಮರ ದಲ್ಲಿ ಅಡಿಕೆ ಗೋಡೌನ್‌ ಮೇಲೆ ಜಿಎಸ್‌ಟಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 23 ಕ್ವಿಂಟಾಲ್‌ ಅಡಕೆ ಮುಟ್ಟುಗೋಲು ಹಾಕಿ ಕೊಂಡು ತೆರಿಗೆ ಕಟ್ಟುವಂತೆ ರೈತರಿಗೆ ನೋಟೀಸ್‌ ನೀಡಿದ್ದಾರೆ. 

ಚಂದ್ರಪ್ಪ ಎಂಬುವವರಿಗೆ ಸೇರಿದ ಗೋಡೌನ್‌ನಲ್ಲಿ ಸುಮಾರು 65 ಕ್ವಿಂಟಾಲ್‌ ಅಡಿಕೆ ದಾಸ್ತಾನು ಮಾಡ ಲಾಗಿದ್ದು, ಎಮ್ಮೆಹಟ್ಟಿ ಗ್ರಾಮದ ಕೋಟೇಶ್‌ ಎಂಬುವರಿಗೆ ಸೇರಿದ 23 ಕ್ವಿಂಟಾಲ್‌ ಅಡಿಕೆಯನ್ನು ಸಂಜೆ ವೇಳೆಯಲ್ಲಿ ಮಾರಾಟ ಮಾಡಲು ಕ್ಯಾಂಟರ್‌ನಲ್ಲಿ ತುಂಬಿಸಲಾಗಿತ್ತು.

ಆ ಸಮಯಕ್ಕೆ ಖಚಿತ ಮಾಹಿತಿ ಮೇರೆಗೆ ಬಂದ ಅಧಿಕಾರಿಗಳು ರೈತರ ಗೋಡೌನ್‌ ಹಾಗೂ ಕ್ಯಾಂಟರ್‌ ಅನ್ನು ತಡೆಹಿಡಿದು ಮುಟ್ಟುಗೋಲು ಹಾಕಿ ಕೊಂಡು ಹೋಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು