ವಿಜಯ ಸಂಘರ್ಷ
ಕೆ.ಆರ್ ಪೇಟೆ: ಬೆಂಗಳೂರು ಕನ್ನಡ ಫಿಲಂ ಚೇಂಬರ್ ಸಂಸ್ಥೆ ವತಿಯಂದ ದಿ:ಪುನಿತ್ ರಾಜಕುಮಾರ್ ಜನ್ಮದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭ ವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭ ದಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ಮಾಕವಳ್ಳಿ ಗ್ರಾಮದ ಛಾಯಗ್ರಾಹಕ ಹಾಗೂ ಕಲಾವಿದ ಮಾಕವಳ್ಳಿ ಸೋಮಶೇಖರ್ ಎಂ.ಕೆ. ರವರಿಗೆ ಯುವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಮಾಕವಳ್ಳಿ ಸೋಮಶೇಖರ್ ಮರೆಯಲ್ಲೆ ಕಾಯಕ ಮಾಡುತ್ತ ಸಾಗುತ್ತಿರುವ ನಮ್ಮಂತವರ ಗುರುತಿಸಿ ಬೆಂಗಳೂರು ಕನ್ನಡ ಫಿಲಂ ಚೇಂಬರ್ ಸಂಸ್ಥೆ ತೆರೆಗೆ ತಂದು ಅದರಲ್ಲೂ ದಾನ ಧರ್ಮದ ಗೌರವ ತಂದುಕೊಟ್ಟ ದಿ:ಪುನಿತ್ ರಾಜಕುಮಾರ್ ಜನ್ಮದಿನದ ಅಂಗವಾಗಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ನಮ್ಮ ಜೀವನದಲ್ಲಿ ಉತ್ತಮ ಕನಸು ಗಳಿಗೆ. ಈ ಪ್ರಶಸ್ತಿ ನಮಗೆ ಗೌರವ ಸ್ಪೂರ್ತಿದಾಯಕವಾಗಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟ ಸಿ.ಕೆ. ಸಂಧ್ಯಾ, ಜಿಲ್ಲಾ ಗೃಹರಕ್ಷಕ ದಳ ಇಲಾಖೆ ಚಿತ್ರದುರ್ಗ, ಶಶಿಕುಮಾರ್ ಬಿ.ಹೆಚ್, ಸಹಾಯಕ ನಿರ್ಧೇಶಕ ಪ್ರವಾಸೋದ್ಯಮ ಎಲಾಖೆ. ಜಿ.ರೇಖಾ, ಅಲ್ಪಸಂಖ್ಯಾತರ ಸಮಾಜ ಕಲ್ಯಾಣ ಇಲಾಖೆ ಹಾಗೂ ನಟ ಮೈಕೋ ನಾಗರಾಜ್, ಶಂಖನಾದ ಅಂಜನಪ್ಪ, ಮಹಾಲಕ್ಷ್ಮೀ ಟಿ. ಆರ್. ಚಲನ ಚಿತ್ರ ನಟಿ ಭಾವನಾ ನಾಗೇಂದ್ರಸ್ವಾಮಿ ಸೇರಿದಂತೆ ಗಣ್ಯರಿದ್ದರು
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ
💐💐💐❤️ ಧನ್ಯವಾದಗಳು
ಪ್ರತ್ಯುತ್ತರಅಳಿಸಿ