ಮಲಗಿದ್ದ ವ್ಯಕ್ತಿಯ ಮೇಲೆ ಗೋಡೆ ಕುಸಿತ: ಅಗ್ನಿಶಾಮಕ ದಳದವರಿಂದ ರಕ್ಷಣೆ

ವಿಜಯ ಸಂಘರ್ಷ 
ಭದ್ರಾವತಿ: ಪಾಳು ಬಿದ್ದ ಮನೆಯೊಂದ ರಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಗೋಡೆ ಕುಸಿದ ಪರಿಣಾಮ ವ್ಯಕ್ತಿ ಗಂಭೀರ ಗಾಯಗಳಾಗಿದ್ದು ಆತನನ್ನ ಅಗ್ನಿಶಾಮಕ ದಳದವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಆನಂದ ಸ್ವಾಮಿ ಎಂಬ 38 ವರ್ಷದ ವ್ಯಕ್ತಿಯು ಕಾಗದ ನಗರದ 7 ನೇ ವಾರ್ಡ್ ನ ಪಾಳಬಿದ್ದ ಮನೆಯಲ್ಲಿ ವಿಶ್ರಾಂತಿ ಪಡೆಯುವ ವೇಳೆ ಪಾಳು ಬಿದ್ದ ಮನೆಯ ಗೋಡೆ ಕುಸಿದು ಮೈಮೇಲೆ ಗೋಡೆ ಕುಸಿದಿದೆ. ಈ ಘಟನೆ ಬುಧವಾರ ಸಂಜೆ ಸಂಭವಿಸಿದೆ.

ಸ್ಥಳೀಯರು ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಗಾಯಾಳು ವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಗೆ ರವಾನಿಸಲಾಗಿದೆ. 

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಹಾಯಕ ಅಧಿಕಾರಿ ಹುಲಿಯಪ್ಪ ಸಿ.ಹೆಚ್, ಸಿಬ್ವಂದಿಗಳಾದ ಬಾಬು, ಮಂಜುನಾಥ್, ಸುರೇಶ್, ಶ್ರೀನಿವಾಸ್ ಹರೀಶ್, ಮಹೇಂದ್ರ, ರಾಜಾನಾಯ್ಕ್, ವೀರೇಶ್, ಬಬಲು, ಸಿದ್ದಪ್ಪ ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು