ವಿಜಯ ಸಂಘರ್ಷ
ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಗರಾಡಳಿತ ಇಲಾಖೆ ಯಲ್ಲಿ ನಗರಾಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್ ರಾಜ್ ಶೆಟ್ಟಿ ಕೇಂದ್ರ ಸರ್ಕಾರದ ಅಸ್ಸಾಂ ಬ್ರಹ್ಮಪುತ್ರ ವಾಲಿ ಫರ್ಟಿಲೈಜರ್ ಕಾರ್ಪೋರೇಷನ್ ಲಿಮಿಟೆಡ್ (ಬಿವಿಎಫ್‌ಸಿಎಲ್) ಕಂಪನಿ ನಿರ್ದೇಶಕ ರಾಗಿ ವರ್ಗಾವಣೆಗೊಂಡಿದ್ದಾರೆ.
ಮೋಹನ್‌ರಾಜ್ ಶೆಟ್ಟಿಯವರು ಮಾ.31 ರಂದು ನಗರಾಡಳಿತಾಧಿಕಾರಿ ಹುದ್ದೆ ಯಿಂದ ಬಿಡುಗಡೆಗೊಳ್ಳುತ್ತಿದ್ದು, ಈ ಹಿನ್ನಲೆ ಯಲ್ಲಿ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ಗುರುವಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಹೆಚ್ಚಿನ ಸಹಕಾರ ನೀಡಿದ ನಿವೃತ್ತ ಕಾರ್ಮಿಕರಿಗೆ ಮೋಹನ್‌ರಾಜ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.
ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜೆ ರಾಮಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ನರಸಿಂಹಚಾರ್, ಶಂಕರ್, ಕೆಂಪಯ್ಯ, ಪ್ರಸಾದ್, ಅಡವೀಶಯ್ಯ, ನಾಗರಾಜ್, ಬಸವರಾಜ್, ಜಯರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಹನುಮಂತರಾವ್ ಸ್ವಾಗತಿಸಿ, ಕಾರ್ಯದರ್ಶಿ ಮಹೇಶ್ ವಂದಿಸಿದರು.