ವಿಜಯ ಸಂಘರ್ಷ
ಭದ್ರಾವತಿ: ಹಾವೇರಿ, ಗದಗ, ವಿಜಯ ನಗರ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ ಬೆಳೆ ರಕ್ಷಣೆಗೆ ಭದ್ರಾ ಜಲಾಶಯ ದಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗುತ್ತಿದೆ.
ಪ್ರತಿ ದಿನ 8 ಸಾವಿರ ಕ್ಯುಸೆಕ್‌ನಂತೆ ಏ: 1 ರ ನಾಳೆ ಸಂಜೆ 6 ರಿಂದ ಮೂರು ದಿನಗಳ ವರೆಗೆ ಭದ್ರಾ ಜಲಾಶಯ ದಿಂದ ನೀರು ಹರಿಸಲಾಗುತ್ತಿದೆ. ಹೀಗಾಗಿ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡದಂತೆ, ದನಗಳ ಮೈ ತೊಳೆಯಲು ನದಿಗೆ ಇಳಿಯದಂತೆ ನೀರಾವರಿ ನಿಗಮ ಕೋರಿದೆ.
ಈ ಅವಧಿಯಲ್ಲಿ ವಿದ್ಯುತ್ ಹಾಗೂ ಡೀಸೆಲ್ ಪಂಪ್‌ಸೆಟ್ ಮತ್ತು ಟ್ಯಾಂಕರ್ ಗಳ ಮೂಲಕ ಅನಧಿಕೃತ ವಾಗಿ ನದಿಯಿಂದ ನೀರು ಎತ್ತುವುದು ಹಾಗೂ ಕೊಂಡೊಯ್ಯುವುದನ್ನು ನಿಷೇಧಿಸ ಲಾಗಿದೆ. ನದಿ ಪಾತ್ರದಲ್ಲಿ ವಾಸವಿರು ವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.