ಭದ್ರಾವತಿ: ವಿದ್ಯಾರ್ಥಿಗಳಲ್ಲಿ ಮೊಬೈಲ್ ಮತ್ತು ಟಿವಿ ಹುಚ್ಚನ್ನು ಕಡಿಮೆ ಮಾಡಿ, ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ ಎಂದು ಶಿಮುಲ್ ತಾಂತ್ರಿಕ ನಿವೃತ್ತ ಅಧಿಕಾರಿ ತಮ್ಮಯ್ಯ.ಎನ್. ಹೇಳಿದರು.
ತಾಲ್ಲೂಕಿನ ವಿವಿಧ ಶಾಲಾ ಕಾಲೇಜು ಗಳ ಗ್ರಂಥಾಲಯಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
ತಾಲೂಕು ಹಿರಿಯೂರಿನ, SBMMR ಪ್ರೌಢ ಶಾಲೆಯ ಗ್ರಂಥಾಲಯಕ್ಕೆ 2 ಸಾವಿರ ರೂ ಬೆಲೆಬಾಳುವ ಪುಸ್ತಕ ಗಳನ್ನು ಹಾಗೂ ಶಾಲೆಗೆ, ಸಂವಿಧಾನ ಶಿಲ್ಪಿ ಡಾ: ಅಂಬೇಡ್ಕರ್ ರವರ ಫೋಟೋ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಕುವೆಂಪುರವರ ಫೋಟೋವನ್ನು, ಉಚಿತವಾಗಿ ಶಾಲೆಗೆ ಮುಖ್ಯೋಪಾಧ್ಯಾಯ ಹಾರೋಹಳ್ಳಿ ಸ್ವಾಮಿ ಇವರಿಗೆ ನೀಡಿದರು.
ತಾಲೂಕು ನಾಗತಿ ಬೆಳಗಲು ಗ್ರಾಮದ ಶ್ರೀ ನಂಜುಂಡೇಶ್ವರ ಪ್ರೌಢಶಾಲೆಗೆ ಅಂದಾಜು ಮೂರು ಸಾವಿರಕ್ಕೂ ಅಧಿಕ ಬೆಲೆಯ, ಉತ್ತಮ ಗ್ರಂಥಗಳನ್ನು ಶಾಲೆಯ ಗ್ರಂಥಾಲಯಕ್ಕೆ ವಿತರಿಸಿದರು.
ಸಾಹಿತಿ ಜೆ.ಎನ್. ಬಸವರಾಜಪ್ಪ ಮತ್ತು ನಾನು, ಈ ಕಾರ್ಯವನ್ನು ಮಾಡಿದ್ದೇವೆ. ಇದು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯೋಗವಾದರೆ, ನಮ್ಮ ಶ್ರಮ ಸಾರ್ಥಕ ವಾಗುತ್ತದೆ ಎಂದರು.
ಎನ್ ತಮ್ಮಯ್ಯನವರ ಈ ಸೇವಾ ಕಾರ್ಯವನ್ನು ಗುರುತಿಸಿದ, ಎರಡು ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿ ಗೌರವ ಸಲ್ಲಿಸಿದರು.