ಕೆ.ಆರ್.ಪೇಟೆ: ತಾಲೂಕಿನ ಅಕ್ಕಿ ಹೆಬ್ಬಾಳು ಹೋಬಳಿಯ ಬೀರುವಳ್ಳಿ ಗ್ರಾಮದಿಂದ ಬೆಂಗಳೂರಿಗೆ ಸರ್ಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಎಂದು ಗುಬ್ಬಿ ಶಾಸಕ ಮತ್ತು ಕೆ.ಎಸ್.ಆರ್.ಟಿ.ಸಿ ರಾಜ್ಯ ಅಧ್ಯಕ್ಷ
ಎಸ್.ಆರ್. ಶ್ರೀನಿವಾಸ್ ಅವರಿಗೆ ಬೀರುವಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದರು. ಮನವಿಯನ್ನ ಪರಿಗಣಿಸಿದ ಶಾಸಕ ಶ್ರೀನಿವಾಸ್ ಬೀರುವಳಿ ಗ್ರಾಮದಿಂದ ಪ್ರತಿ ನಿತ್ಯ ಮುಂಜಾನೆ 5. ಗಂಟೆಗೆ ಅಕ್ಕಿಹೆಬ್ಬಾಳು ಮಂಡ್ಯ ಮಾರ್ಗವಾಗಿ ಬೆಂಗಳೂರುಗೆ ಕೆ ಎಸ್ ಆರ್ ಟಿ ಎಸ್ ಬಸ್ ಸೌಲಭ್ಯ ನೀಡುವಂತೆ ಆದೇಶದ ಹಿನ್ನೆಲೆಯಲ್ಲಿ ಬಿರುವಳ್ಳಿ ಗ್ರಾಮಕ್ಕೆ ಬಂದ ಸರ್ಕಾರಿ ಬಸ್ ಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುವ ಮುಖಾಂತರ ಸ್ವಾಗತಿಸಿದ್ದಾರೆ.
ಬಳಿಕ ಮಾತನಾಡಿದ ಮುಖಂಡ ಬೀರುವಳ್ಳಿ ಬಿ ನವೀನ್ ಕುಮಾರ್ ನಮ್ಮ ಗ್ರಾಮದ ಸಮೀಪವಿರುವ ಪ್ರಸಿದ್ಧ ಕ್ಷೇತ್ರವಾಗಿ ಹೊರಹೊಮ್ಮುತ್ತಿ ರುವ ಶ್ರೀ ಚಂದಗೊಳಮ್ಮ ದೇವಾಲಯಕ್ಕೆ ರಾಜ್ಯ ಮತ್ತು ಹೊರ ರಾಜ್ಯದಿಂದ ಆಗಮಿಸು ಹಿನ್ನೆಲೆಯಲ್ಲಿ ದೂರದಿಂದ ಬರುವ ಭಕ್ತರಿಗೆ ಹಾಗೂ ಗ್ರಾಮಸ್ಥರಿಗೂ ಪ್ರಮುಖವಾಗಿ ಬೇಕಾಗಿದ್ದ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ರವರಿಗೆ ಮನವಿ ಮಾಡಿದ್ದು ಆ ಮನವಿಯನ್ನ ಪರಿಗಣಿಸಿ, ತಕ್ಷಣ ಸ್ಪಂದಿಸಿ ಈ ಸೇವೆಯನ್ನು ಒದಗಿಸಿ ಸಾರ್ವಜನಿಕರಿಗೆ ಸೇವಾ ಮನೋ ಭಾವಕ್ಕೆ ನಾವು ಸದಾ ಎಂದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವ ಅವರ ಕಾರ್ಯಕ್ಕೆ ನಿಜಕ್ಕೂ ಶ್ಲಾಘನೀಯ ಎಂದು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಕುಮಾರ್, ನಟೇಶ್,ಎಸ್ ಟಿ ಶಿವಶಂಕರ್,ಬೀರುವಳ್ಳಿ ಗ್ರಾಮಸ್ಥರು ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*