ಅಂಬೇಡ್ಕರ್ ಭವನ ಊಟದ ಕೊಠಡಿ ನಿರ್ಮಾಣಕ್ಕೆ ಅನುದಾನ ಕೋರಿ ಮನವಿ

ವಿಜಯ ಸಂಘರ್ಷ ನ್ಯೂಸ್ 

ಭದ್ರಾವತಿ: ಮುಕ್ತಾಯ ಹಂತದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನಕ್ಕೆ ಊಟದ ಕೊಠಡಿ ಅಗತ್ಯವಿದ್ದು, ಸುಮಾರು 2 ಕೋ. ರು. ಅನುದಾನ ಬಿಡುಗಡೆ ಗೊಳಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ್,ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್.ಸಿ ಮಹಾ ದೇವಪ್ಪರವರಿಗೆ ಮಂಗಳವಾರ ಪತ್ರ ಬರೆದು ಕೋರಿದ್ದಾರೆ.


ಕ್ಷೇತ್ರದ ನಿವಾಸಿಗಳ ಹಲವು ದಶಕಗಳ ಬೇಡಿಕೆಯಾಗಿದ್ದ ವಿಶ್ವಜ್ಞಾನಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕ‌ರ್ ರವರ ಸುಸಜ್ಜಿತ ಭವನ ಸುಮಾರು 5 ಕೋ.ರು. ವೆಚ್ಚದಲ್ಲಿ ನಿರ್ಮಾಣ ಗೊಂಡು ಮುಕ್ತಾಯ ಹಂತ ತಲುಪಿದ್ದು, ಭವನದ ಹಿಂಭಾಗದಲ್ಲಿ ಊಟದ ಕೊಠಡಿ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಅಗತ್ಯವಿರುವ ಅನುದಾನ ಸರ್ಕಾರದಿಂದ ಮಂಜೂರಾತಿ ಮಾಡಿಸಿಕೊಡುವಂತೆ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ ಎನ್ ರಾಜು ಶಾಸಕ ಬಿ.ಕೆ. ಸಂಗಮೇಶ್ವರ್ ರವರಿಗೆ ಸಲ್ಲಿಸಿದ ಮನವಿಯಲ್ಲಿ ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು