ಛಲವಾದಿ ಸಮೂದಾಯ ಭವನಕ್ಕಾಗಿ ಸಿಂಗನಮನೆ ಯಲ್ಲಿ ಪ್ರತಿಭಟನೆ

ವಿಜಯ ಸಂಘರ್ಷ ನ್ಯೂಸ್ 

ಭದ್ರಾವತಿ: ಶಾಂತಿನಗರದ ಛಲವಾದಿ ಸಮೂದಾಯ ಭವನ ನಿರ್ಮಾಣ ಮಾಡಲು ಖಾಲಿ ನಿವೇಶನಕ್ಕೆ ಬೇಡಿಕೆ ಇಟ್ಟು ಛಲವಾದಿ ಡಾ. ಬಿ.ಆರ್ ಅಂಬೇಡ್ಕರ್ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಶಾಂತಿನಗರ ಗೋಮಾಳ ಜಾಗದಲ್ಲಿ ಸಮೂದಾಯ ಭವನ ನಿರ್ಮಾಣ ಮಾಡಲು ಅನುಮತಿ ಕೋರಿ ಈಗಾಗಲೇ ತಹಶೀಲ್ದಾರ್ ರಿಗೆ ಮನವಿ ಮಾಡಲಾಗಿದೆ. ಖಾಲಿ ಜಾಗ ಕೆಪಿಸಿ ಸುಪರ್ದಿಯಲ್ಲಿದ್ದು, ಅವರಿಂದ ಛಲವಾದಿ ಸಂಘಕ್ಕೆ ಹಸ್ತಾಂತರಿಸ ಬೇಕೆಂದು ಪ್ರತಿಭಟನಾಕಾರರು ಅಗ್ರಹಿಸಿದರು.

ಛಲವಾದಿ ಸಂಘದ ಕಾರ್ಯದರ್ಶಿ ಮಹೇಶ್ ಮಾತನಾಡಿ, ಸ್ಥಳದ ಸಂಬಂಧ ಸಮಾಜ ಕಲ್ಯಾಣ ಸಚಿವ ಎಸ್.ಸಿ ಮಹದೇವಪ್ಪ, ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು  ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಅವರು ಸಕರಾತ್ಮಕ ವಾಗಿ ಪ್ರತಿಕ್ರಿಯಿಸಿದ್ದು, ಎರಡುವರೆ ಎಕರೆ ಗೋಮಾಳದ ಭೂಮಿಯಲ್ಲಿ ಸಮೂದಾಯ ಭವನ ನಿರ್ಮಾಣಕ್ಕೆ ಬೇಕಾಗುವಷ್ಟು ಜಾಗ ಕೊಡಿಸುವು ದಾಗಿ ಭರವಸೆ ನೀಡಿದ್ದಾರೆ. 

ಈಗಾಗಲೇ ಕಂದಾಯ ಇಲಾಖೆಯಿಂದ ಸರ್ವೇ ಮಾಡಲಾಗಿದೆ. ಈ ಮಧ್ಯೆ ಕೆಪಿಸಿ ಅಧಿಕಾರಿಗಳು ಖಾಲಿ ನಿವೇಶನಕ್ಕೆ ಕಾಂಪೌoಡ್ ನಿರ್ಮಿಸಿ ಗೇಟ್ ಅಳವಡಿಸಲು ಮುಂದಾಗಿ ದ್ದಾರೆ. ಕೆಪಿಸಿ ವರ್ತನೆ ಖಂಡಿಸಿ  ಪ್ರತಿಭಟನೆ ನಡೆಸಲಾಗುತ್ತಿದೆ. ಕೆಪಿಸಿ ಅಧಿಕಾರಿಗಳು ಸಂಘದ ದಾಖಲೆ ಗಳನ್ನು ಸರ್ಕಾರದ ವತಿಯಿಂದ ಮಾಡಿಕೊಂಡ ನಂತರ ಬಿಟ್ಟುಕೊಡು ವುದಾಗಿ ಹೇಳುತ್ತಿದ್ದಾರೆ ಎಂದರು.

ಪ್ರತಿಭಟನಾ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ, ಅಕ್ಕಿ ಮಂಜು, ಚಂದನ, ಪುನೀತ್, ಶಶಿ, ಛಲವಾದಿ ಸಂಘದ ಅಧ್ಯಕ್ಷ ಶಿವರುದ್ರಪ್ಪ, ಪ್ರಧಾನ ಕಾರ್ಯದರ್ಶಿ ಕಾಂತರಾಜು ಕಾರ್ಯದರ್ಶಿ ರಾಜಶೇಖರ್ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು