ಭದ್ರಾವತಿ-ಪುನೀತ್ ಇಲ್ಲದ ಜನ್ಮದಿನ ನಮ್ಮೆಲ್ಲರಿಗೂ ಸಂಕಟದ ದಿನ

ವಿಜಯ ಸಂಘರ್ಷ 
ಭದ್ರಾವತಿ: ಕರ್ನಾಟಕ ರತ್ನ, ನಟ ಪುನೀತ್‌ರಾಜ್‌ಕುಮಾ‌ರ್ ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ಎಂದು ಎರೇಹಳ್ಳಿ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ ಕೋಗಲೂರು ತಿಪ್ಪೇಸ್ವಾಮಿ ಬಣ್ಣಿಸಿದರು.

ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಆಯೋಜಿಸ ಲಾಗಿದ್ದ ಕರ್ನಾಟಕ ರತ್ನ, ನಟ, ಸಮಾಜ ಸೇವಕ ಪುನೀತ್‌ ರಾಜ್‌ಕುಮಾರ್‌ರವರ 50ನೇ ವರ್ಷದ ಹುಟ್ಟುಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

ಅಂದು ಪುನೀತ್ ರಾಜ್‌ಕುಮಾರ್‌ ರವರ ನಿಧನಕ್ಕೆ ಇಡೀ ವಿಶ್ವವೇ ಕಂಬನಿ ಮುಡಿದಿತ್ತು. ಅವರೊಬ್ಬ ಧೀಮಂತ ನಾಯಕರಾಗಿ ಇಂದಿಗೂ ಕಂಗೊಳಿಸು ತ್ತಿದ್ದಾರೆ. ಅವರಿಲ್ಲದ 50ನೇ ವರ್ಷದ ಹುಟ್ಟುಹಬ್ಬ ಇಂದು ನಮ್ಮೆಲ್ಲರಿಗೂ ಸಂಕಟದ ದಿನವಾಗಿದೆ. ನಿಜ ಜೀವನದ ಒಬ್ಬ ನಾಯಕನಾಗಿ, ಸೇವಕನಾಗಿ ನಮ್ಮೆಲ್ಲರಿಗೂ ಭೂತಕಾಲ, ವರ್ತಮಾನ ಕಾಲ ಹಾಗು ಭವಿಷ್ಯ ಕಾಲ 3 ಕಾಲಕ್ಕೂ ಒಪ್ಪುವಂತಹ ಎಂದೆಂದಿಗೂ ಏಕೈಕ ಆದರ್ಶ ವ್ಯಕ್ತಿ ಪುನೀತ್ ರಾಜ್‌ಕುಮಾರ್ ಎಂದರೆ ತಪ್ಪಾಗಲಾರದು. 

ಇಂತಹ ಮಹಾನ್ ವ್ಯಕ್ತಿಯ ಹುಟ್ಟುಹಬ್ಬ ಆಚರಣೆ ಮಾಡುತ್ತಿರು ವುದು ಹೆಮ್ಮೆಯ ವಿಚಾರವಾಗಿದೆ. ಕಲಾವಿದರು ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.

ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ನಟರಾಜ್, ಸಂಘದ ಗೌರವ ಸಲಹೆಗಾರ ರಾಜವಿಕ್ರಂ, ಹಿರಿಯ ಕಲಾವಿದ ಜಿ.ಪಿ. ನಂಜುಂಡೇ ಗೌಡ ಹಾಗು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಎಲ್. ದೇವರಾಜ್ ಮತ್ತಿತರರು ಮಾತನಾಡಿದರು.

ಇದೆ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಮಂಜುನಾಥ್ ಮತ್ತು ರಂಗ ಕಲಾವಿದ ವೈ.ಕೆ.ಹನುಮಂತಯ್ಯ ಅವರನ್ನು ಸನ್ಮಾನಿಸಲಾಯಿತು. 

ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿ ಗಳು, ಕಲಾವಿದರು ಸೇರಿದಂತೆ ಇನ್ನಿತರರು ಪಾಲ್ಗೊಂಡಿ ದ್ದರು. ಕಲಾವಿದರಿಂದ ಪುನೀತ್‌ರಾಜ್‌ ಕುಮಾರ್ ಚಲನಚಿತ್ರ ಗೀತೆಗಳ ಗಾಯನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು