ರೋಟರಿ ಕ್ಲಬ್ ಸೆಂಟ್ರಲ್‌ ನಲ್ಲಿ ಹೋಳಿ ಸಂಭ್ರಮಾಚರಣೆ

ವಿಜಯ ಸಂಘರ್ಷ 
ಶಿವಮೊಗ್ಗ: ರೋಟರಿ ಶಿವಮೊಗ್ಗ ಸೆಂಟ್ರಲ್ ಮತ್ತು ಆನ್ಸ್ ಕ್ಲಬ್ ವತಿ ಯಿಂದ ಭಾನುವಾರ ಹೋಳಿ ಹಬ್ಬ ಆಚರಿಸಲಾಯಿತು. ಕ್ಲಬ್ ಸದಸ್ಯರು ಕುಟುಂಬಸಮೇತ ಆಗಮಿಸಿ ಹೋಳಿ ಆಚರಿಸಿ ಸಂಭ್ರಮಿಸಿದರು.

ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಜಿ ಮಾತನಾಡಿ, ಹೋಳಿ ಹಬ್ಬವು ಬಣ್ಣಗಳ ಹಬ್ಬ, ಹೋಳಿ ಹಬ್ಬವು ಕೆಟ್ಟದರ ಮೇಲೆ ಒಳ್ಳೆಯದರ ವಿಜಯೋತ್ಸವ ಆಚರಣೆ ಎಂದು ನಂಬಲಾಗಿದೆ. ಇತ್ತೀಚೆಗೆ ಹೋಳಿ ಹಬ್ಬವು ಜಾಗತಿಕ ಹಬ್ಬವಾಗು ತ್ತಿದೆ. ವಿದೇಶ ಗಳಲ್ಲೂ ಹಬ್ಬದ ಆಚರಣೆ ನಡೆಯುತ್ತಿದೆ. ಬಣ್ಣದ ಹಬ್ಬ ಎಂದರೆ ಕುಟುಂಬ ಮತ್ತು ಸ್ನೇಹಿತ ರೊಡನೆ ಸೇರಿ ಉತ್ತಮ ಸಮಯ ಕಳೆಯುವುದು. ಹೋಳಿ ಹಬ್ಬವು ಜನರನ್ನು ಒಗ್ಗೂಡಿಸುತ್ತದೆ ಮತ್ತು ಸಾಮರಸ್ಯ, ಪ್ರೀತಿ, ಸಂತೋಷ ಹರಡುತ್ತದೆ. ಕಾರ್ಯಕ್ರಮ ಆಯೋಜನೆ ಮಾಡಿದಂತ ಆನ್ಸ್ ಕ್ಲಬ್ ಅಧ್ಯಕ್ಷೆ ಗೀತಾ ಜಗದೀಶ್ ತಂಡಕ್ಕೆ ಅಭಿನಂದನೆ ಎಂದರು.

ಆನ್ಸ್ ಕ್ಲಬ್ ಅಧ್ಯಕ್ಷೆ ಗೀತಾ ಜಗದೀಶ್ ಮಾತನಾಡಿ, ಹೋಳಿ ಹಬ್ಬ ಆಚರಿಸುತ್ತಿ ರುವುದು ಸಂತಸ ತಂದಿದೆ. ಹಬ್ಬವು ಪರಸ್ಪರ ಪ್ರೀತಿ ಮತ್ತು ಹೊಂದಾಣಿಕೆ ತರುತ್ತದೆ. ಮಕ್ಕಳು ಸಹ ಖುಷಿಯಿಂದ ಬಣ್ಣದ ಆಟ ಆಡುತ್ತಾರೆ ಎಂದು ತಿಳಿಸಿದರು.

ಹೋಳಿ ಹಬ್ಬದಲ್ಲಿ ಮಾಜಿ ಸಹಾಯಕ ಗವರ್ನರ್ ರವಿ ಕೂಟೋಜಿ,ರಮೇಶ್. ಎನ್, ಬಸವರಾಜ್.ಬಿ, ಜಯಶೀಲ ಶೆಟ್ಟಿ, ವಿರುಪಾಕ್ಷ, ಮೋಹನ್, ಧರ್ಮೇಂದ್ರ ಸಿಂಗ್, ಚಂದ್ರು ಜೆಪಿ, ಚಿದಾನಂದಯ್ಯ, ಸ್ಪಂದನ ಹೊಳ್ಳ, ಜ್ಯೋತಿ ಶ್ರೀ ರಾಮ್, ರಾಜಶ್ರೀ, ದೀಪ ಶೆಟ್ಟಿ, ಲಕ್ಷ್ಮೀ ಕಿರಣ್,ಶುಭಾ ಚಿದಾನಂದಯ್ಯ, ಸವಿತಾ ಹಾಗೂ ಕ್ಲಬ್ಬಿನ ಸದಸ್ಯರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು