ವಿಜಯ ಸಂಘರ್ಷ
ಕೆಆರ್ ಪೇಟೆ :ತಾಲ್ಲೂಕಿನ ನಾಗರ ಘಟ್ಟ ಗ್ರಾಮದ ಸುಜಾತ ಟಿ.ರವರು ಡ್ರೀಮ್ ಡೀಲ್ ಗ್ರೂಪ್ ಕಂಪನಿಯಗೆ ತಿಂಗಳು 1 ಸಾವಿರ ಉಳಿತಾಯ ಯೋಜನೆಯಲ್ಲಿ ತೊಡಗಿಸಿ ಕೊಂಡಿದ್ರು ಅದೇ ರೀತಿ ಕಂಪನಿಯ "ಯು ಟ್ಯೂಬ್ ಲೈವ್ "ಲಕ್ಕಿ ಡ್ರಾ ನಲ್ಲಿ 50 ಸಾವಿರ ಬೆಲೆ ಬಾಳುವ ಒಂದು ಚಿನ್ನದ ನೆಕ್ಲೆಸ್ ಅನ್ನು ಬಂಪರ್ ಬಹುಮಾನವಾಗಿ ಪಡೆದಿ ದ್ದಾರೆ. ಅಲ್ಲದೆ ಸಾಸಲು ಗ್ರಾಮದ ಪ್ರಕಾಶ್, ಅಭಿಷೇಕ್ ನಾಯಕ್, ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಭಾಗದ ಉಮೇಶ್, ಸಂದೀಪ್, ಎಂಬುವರಿಗೆ ಚಿನ್ನದ ಉಂಗುರ ಹಾಗೂ ಸಾಸಲು ಸಂಜಯ್, ಗೀರಿಶ್ ರವರಿಗೆ ಸ್ಮಾರ್ಟ್ ವಾಚ್ ಅನ್ನು ಇಂದು ಗ್ರಾಹಕರಿಗೆ ವಿತರಿಸಲಾಯಿತು..
ನಂತರ ಡ್ರೀಮ್ ಡೀಲ್ ಕಂಪನಿಯ ನಿರ್ದೇಶಕ ಚೇತನ್ ಮತ್ತು ಸಾಸಲು ಕಾಂತರಾಜು ಮಾತನಾಡಿ ಪ್ರತಿ ತಿಂಗಳು ಒಂದು ಸಾವಿರ ಉಳಿತಾಯ ಯೋಜನೆಯಲ್ಲಿ ತೊಂಡಗಿಸಿಕೊಂಡು ಹಣವನ್ನು ಉಳಿತಾಯ ಮಾಡಿ ಮನೆಗೆ ಬೇಕಾದ ಗೃಹೋಪಯೋಗಿ ವಸ್ತುಗಳನ್ನು ನಮ್ಮ ಶೋರೂಮ್ ನಲ್ಲೇ ಖರೀದಿಸಬಹುದು ಅಲ್ಲದೆ ಕಂಪನಿಯು ಪ್ರತಿ ತಿಂಗಳು ಗ್ರಾಹಕರಿಗೆ ಬಹುಮಾನದ ಲಾಟರಿ ನಡೆಸಲಿದ್ದು ಆಯ್ಕೆಯಾದ ಗ್ರಾಹಕರಿಗೆ ನೇರವಾಗಿ ಬಹುಮಾನಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಿದೆ ಎಂದರು.
ಈ ಸಂದರ್ಭದಲ್ಲಿ ಡ್ರೀಮ್ ಡೀಲ್ ಕಂಪನಿಯ ನಿರ್ದೇಕರಾದ ಚೇತನ್, ಸಾಸಲು ಕಾಂತರಾಜು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಅಧ್ಯಕ್ಷ ಜಾವಿದ್, ಖಾದಿಬೋರ್ಡ್ ತಾಲ್ಲೂಕು ಅಧ್ಯಕ್ಷ ಗಣೇಶ್, ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ