ವಿಜಯ ಸಂಘರ್ಷ
ಹುಣಸಗಿ: ನಾರಾಯಣಪುರ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸದ ಪರಿಣಾಮ ಸಾಕಷ್ಟು ರೈತರು ತೊಂದರೆ ಅನುಭವಿಸುತ್ತಿದ್ದು ಬೆಳೆದ ಬೆಳೆಗಳಿಗೆ ನೀರಿನ ಅಭಾವ ತಪ್ಪಿಸಲು ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶನಿವಾರ ಮನವಿ ಸಲ್ಲಿಸಲಾಯಿತು.
ಈ ಭಾಗದ ಹೆಚ್ಚು ಜನರು ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಇದೀಗ ಕಾಲುವೆ ಗಳಿಗೆ ಕೆಬಿಜೆಎನ್‌ಎಲ್ ನಿಗಮವು ನೀರು ಹರಿಸುವುದಿರುವು ದರಿಂದ ಬೆಳೆಗಳು ಕಾಳುಕಟ್ಟುವ ಹಂತದಲ್ಲಿ ರುವ ಭತ್ತ ಸೇರಿದಂತೆ ಇತರ ಬೆಳೆಗಳು ಸಂಪೂರ್ಣ ಒಣಗಿ ಹೋಗಲಿದ್ದು ರೈತಾಪಿ ವರ್ಗಕ್ಕೆ ದಿಕ್ಕೇ ತೋಚ ದಂತಾಗಿದೆ. ಇನ್ನೆರೆಡು ದಿನಗಳಲ್ಲಿ ಕಾಲುವೆಗಳಿಗೆ ನೀರು ಹರಿಸದಿದ್ದಲ್ಲಿ ಸಾಕಷ್ಟು ರೈತರು ಬೆಳೆ ಕಳೆದು ಕೊಂಡು ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಗು ತ್ತದೆ. ಈ ಹಿನ್ನಲೆಯಲ್ಲಿ ಏಪ್ರಿಲ್ 15 ರವರೆಗೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿದರು.
ನೀರು ಹರಿಸದೆ ನಿರ್ಲಕ್ಷ ವಹಿಸಿದ್ದಲ್ಲಿ ನಾರಾಯಣಪುರ ಮುಖ್ಯ ಅಭಿಯಂತರರ ಕಛೇರಿ ಮುಂಭಾಗ ಕರವೇ ವತಿಯಿಂದ ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಹುಣಸಗಿ ತಾಲೂಕು ಅಧ್ಯಕ್ಷ ಬಸವರಾಜ ಚನ್ನುರು, ಪ್ರಮುಖರಾದ ಶಿವಲಿಂಗ ಸಾಹುಕಾರ್ ಪಟ್ಟಣಶೆಟ್ಟಿ, ರಾಜು ಅವರಾದಿ, ಶಿವಣಗೌಡ ಸದಬ, ಹನಮಗೌಡ ಮಾಲಿಪಾಟೀಲ್, ಬಸವರಾಜ ಕೊಂಡಗೂಳಿ, ಪ್ರಶಾಂತ್ ನಾಯಕ, ಹಣಮಂತ ದೊರಿ, ಸಂಗಮೇಶ್ ಕೊಡೇಕಲ್, ಬಸವ ರಾಜ್ ಕೊಡೇಕಲ್, ಬಸವರಾಜ ರಾಥೋಡ್ ಮತ್ತಿತರರಿದ್ದರು
ವರದಿ : ಶಿವು ರಾಠೋಡ್