ವಿಜಯ ಸಂಘರ್ಷ
ಕೆ.ಆರ್.ಪೇಟೆ: ತಾಲ್ಲೂಕಿನ ಶೀಳನೆರೆ ಹೋಬಳಿ ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಯಶಸ್ಸನ್ನು ಗಳಿಸಿದ್ದಾರೆ.
ಸಂಘದ ನೂತನ ಆಡಳಿತ ಮಂಡಳಿಯ 12 ನೂತನ ನಿರ್ದೇಶಕ ಸ್ಥಾನದಲ್ಲಿ 7ಮಂದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಸಿದ್ದರಾದರೆ. ಕಾಂಗ್ರೆಸ್ ಬೆಂಬಲಿತ 5 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಜಯಭೇರಿ ಬಾರಿಸಿದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಶಾಸಕ ಹೆಚ್ ಟಿ ಮಂಜು ಅವರ ಸಹೋದರ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೆಚ್ ಟಿ ಲೋಕೇಶ್ ಜೆಡಿಎಸ್ ಕಚೇರಿಯಲ್ಲಿ ಅಭಿನಂದಿಸಿದರು.
ಸೊಸೈಟಿ ನೂತನ ನಿರ್ದೇಶಕರಾಗಿ ಆಯ್ಕೆ ಯಾದ ಸಾಲಗಾರರಲ್ಲದ ಕ್ಷೇತ್ರದಿಂದ ಶಿವಸಾಗರ್ (ವಡೆಶಿವು), ನಿರ್ದೇಶಕರಾದ ಕೃಷ್ಣಗೌಡ,ಗೋವಿಂದ ರಾಜು, ಬಲರಾಮ, ಜಯರಾಮು, ಎಂ.ಬಿ ರಮೇಶ್,ನಾಗಮ್ಮ, ಸರಸ್ವತಿ, ನಂಜಪ್ಪಚಾರ್, ನಂಜುಂಡಪ್ಪ, ರಾಜು, ಲಲಿತಮ್ಮ ಅವರನ್ನು ಅಭಿನಂದಿಸಿ ವಿಜಯೋತ್ಸವ ಆಚರಿಸಿದರು.
ಚುನಾವಣೆ ಅಧಿಕಾರಿಗಳಾಗಿ ತಾಲ್ಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಭರತ್, ಹೇಮಲತಾ ಸಹ ಚುನಾವಣಾ ಅಧಿಕಾರಿಯಾಗಿ ಸೊಸೈಟಿ ಕಾರ್ಯದರ್ಶಿ ಚೇತನ್ ಕುಮಾರ್ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಗ್ರಾಮ ಪಂಚಾಯತಿ ಸದಸ್ಯ ಜಗದೀಶ್, ಅಗಸರಹಳ್ಳಿ ಬಲರಾಮು,ನಾಗೇಶ್, ಯೋಗೇಶ್, ಸೇರಿದಂತೆ ಮುರುಕನಹಳ್ಳಿ ಸೊಸೈಟಿ ವ್ಯಾಪ್ತಿಯ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ
ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ