ಮಹಿಳಾ ಕಲಾವಿದರು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ: ಮೇಘರಂಜಿನಿ

ವಿಜಯ ಸಂಘರ್ಷ 
ಭದ್ರಾವತಿ: ಮಹಿಳಾ ಕಲಾ ವಿದರು ತಮ್ಮದೇ ಆದ ಕರ್ತವ್ಯ ಗಳ ಜೊತೆಗೆ ಆರೋಗ್ಯದೆಡೆಗೆ ಹೆಚ್ಚು ಗಮನ ನೀಡಬೇಕು. ನಾವು ಆರೋಗ್ಯ ಸದೃಢರಾಗಿದ್ದರೆ ಏನನ್ನಾದರೂ ಸಾಧಿಸಬಹುದೆಂದು ಸ್ಯಾಕ್ರೋಫೋನ್ ಕಲಾವಿದೆ ಮೇಘರಂಜಿನಿ ಹೇಳಿದರು. 

ಅವರು ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ತಾಲೂಕು ಸವಿತಾ ಮಹಿಳಾ ಸಂಘದ ಅಧ್ಯಕ್ಷೆ ರುಕ್ಕಿಣಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಹಿಳೆಯರಿಗೆ ತನ್ನದೇ ಆದ ಜವಾಬ್ದಾರಿಗಳು ಇರುತ್ತವೆ. ಕಲಾವಿದರು ಸಮಾಜಕ್ಕೆ ಪೂರಕವಾಗಿ ತಾವು ಕಲಿತ ಕಲೆಯನ್ನು ಯುವ ಪೀಳಿಗೆಗೆ ಉಣಬಡಿಸಿ ಕಲೆಯ ಗಿಳನ್ನು ಉಳಿಸಬೇಕಾದ ಆನಿವಾರ್ಯತೆ ಉಂಟಾಗಿದೆ ಎಂದರು.

ಉದ್ಯಮಿ ಬಿ.ಕೆ.ಜಗನ್ನಾಥ್ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು. ಸವಿತಾ ಮಹಿಳಾ ಸಂಘದ ಅಧ್ಯಕ್ಷೆ ರುಕ್ಕಿಣಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸವಿತಾ ಸಮಾಜದ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಲತಾ ರಮೇಶ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು.

ಸಭೆಯಲ್ಲಿ ಸುಶೀಲಮ್ಮ, ಹೇಮಕ್ಕ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಎನ್. ಎಸ್. ರಮೇಶ್, ಎಂ.ರಾಜು, ಜಿ.ವೆಂಕಟೇಶ್, ಪಿ.ವರದರಾಜು, ಬಾಂಬೆ ನಾಗರಾಜ್, ತುಳಸಿಡೋಲು ಮಂಜು, ಮೂರ್ತಿ, ಅಂಧರ ಶಾಲೆಯ ಸಂಸ್ಥಾಪಕ ಶಿವಬಸಪ್ಪ, ಕಾವೇರಿ, ಭುವನೇಶ್ವರಿ, ರೇಣುಕಾ, ಮಂಜುಳಮ್ಮ. ಅನುಶ್ರೀ, ಮಮತಾ, ನಾಗರತ್ನ,ಮಾನಸ ಮತ್ತಿರರಿದ್ದರು. ಅಂಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು