ವಿಜಯ ಸಂಘರ್ಷ
ಭದ್ರಾವತಿ: ತಾಲ್ಲೂಕು ಆಡಳಿತ ಮತ್ತು ಸರ್ಕಾರಿ ಕಚೇರಿಗಳಿಂದ ಆಯೋಜಿಸ ಲಾಗುವ ಎಲ್ಲಾ ಸಭೆ ಮತ್ತು ಪೂರ್ವಭಾವಿ ಸಭೆಗಳಿಗೆ ಪತ್ರಕರ್ತರಿಗೆ ಸಭೆಯಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಮಾಧ್ಯಮ ಮಂಡಳಿ ವತಿಯಿಂದ ತಹಸೀಲ್ದಾರ್, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಪಂ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.ಪತ್ರಕರ್ತರಿಗೆ ಸಭೆಗಳಿಗೆ ಅಹ್ವಾನ ಇದ್ದರು ಮಾಧ್ಯಮಗಳಿಗೆ ನಿಗದಿ ಪಡಿಸಿದ ಆಸಗಳಲ್ಲಿ ಇತರರು ಕುಳಿತು ಕೊಳ್ಳುವುದರಿಂದ ತೊಂದರೆ ಯಾಗುತ್ತಿದ್ದು ಗಮನ ಹರಿಸಲು ಒತ್ತಾಯಿಸಲಾಯಿತು.ಇದರಿಂದ ಪತ್ರಕರ್ತರು ನಿಂತು ಮಾಹಿತಿ ಬರೆದುಕೊಳ್ಳುವ, ಪೋಟೋ ತೆಗೆಯುವ ಮತ್ತು ವಿಡಿಯೋ ಮಾಡುವ ದುಸ್ಥಿತಿ ಎದುರಾಗಿದೆ.
ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಿಂದ ಆಯೋಜಿಸ ಲಾಗುವ ಸಭೆ, ಪೂರ್ವಭಾವಿ ಸಭೆ ಗಳಿಗೆ ಆಗಮಿಸುವ ಎಲ್ಲಾ ಪತ್ರಕರ್ತ ರಿಗೆ ಪ್ರತ್ಯೇಕವಾದ ಆಸನ ಮತ್ತು ಟೇಬಲ್ ವ್ಯವಸ್ಥೆ ಕಲ್ಪಿಸ ಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಮಂಡಳಿ ರಾಜ್ಯಾಧ್ಯಕ್ಷ ಎಚ್.ಮಂಜುನಾಥ್, ಕಾರ್ಯಾಧ್ಯಕ್ಷ ಆರ್.ವಿ.ಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ.ಆರ್.ಶಿವಾನಂದ್, ಶ್ರೀನಿವಾಸ್, ಛಾಯಾಚಿತ್ರ ಗ್ರಾಹಕ ಶ್ರೀನಿವಾಸ್ ಮತ್ತಿತರರಿದ್ದರು.