ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ತಾಲ್ಲೂಕಿನ ಆನೆಗೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ರಾಗಿ ಬಿ.ಎಂ.ಕಿರಣ್, ಉಪಾಧ್ಯಕ್ಷರಾಗಿ ಕಡೆಹೆಮ್ಮಿಗೆ ತಿಮ್ಮೇಗೌಡರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೊಸೈಟಿಯ ಅಧ್ಯಕ್ಷರ ಸ್ಥಾನ ಬಯಸಿ ಬಿ.ಎಂ ಕಿರಣ್ ಆನೆಗೋಳ, ಉಪಾಧ್ಯಕ್ಷ ಸ್ಥಾನ ಬಯಸಿ ತಿಮ್ಮೇಗೌಡ ನಾಮಪತ್ರ ಸಲ್ಲಿಸಿದರು. ಉಳಿದ ನಿರ್ದೇಶಕರಿಂದ ನಾಮಪತ್ರ ಸಲ್ಲಿಕೆ ಆಗದ ಕಾರಣ ನೂತನ ಅಧ್ಯಕ್ಷ ರಾಗಿ ಬಿ.ಎಂ ಕಿರಣ್, ಉಪಾಧ್ಯಕ್ಷರಾಗಿ ತಿಂಮೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಲ್ಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಹೆಚ್.ಬಿ.ಭರತ್ ಕುಮಾರ್ ಘೋಷಿಸಿದರು.
ನೂತನ ಅಧ್ಯಕ್ಷ ಬಿ.ಎಂ.ಕಿರಣ್ ಮಾತನಾಡಿ ನನ್ನನ್ನು ಆನೆಗೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರುಗಳಿಗೆ, ಸೊಸೈಟಿ ವ್ಯಾಪ್ತಿಯ ಎಲ್ಲಾ ಗ್ರಾಮದ ಮುಖಂಡರುಗಳಿಗೆ,ಸಹಕಾರಿ ಧುರೀಣರಿಗೆ ಹಾಗೂ ರಾಜ್ಯ ಸಹಕಾರ ಮಹಾ ಮಂಡಲದ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮೀಗೌಡ ಸೇರಿದಂತೆ ಎಲ್ಲಾ ಹಿತೈಷಿಗಳಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಸಂಘದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ವಾಗಿ ಶ್ರಮಿಸುತ್ತೇನೆ. ಸಂಘದ ಮೂಲಕ ರೈತರಿಗೆ ಶೂನ್ಯ ಬಡ್ಡಿ ಸಾಲ ಸೌಲಭ್ಯ, ರಸಗೊಬ್ಬರ, ಭಿತ್ತನೆ ಬೀಜ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸುಲಭವಾಗಿ ದೊರಕಿಸಿ ಕೊಡಲು ಶಕ್ತಿ ಮೀರಿ ದುಡಿಯುತ್ತೇನೆ. ರೈತರು ಸಕಾಲದಲ್ಲಿ ಪಡೆದ ಸಾಲದ ಕಂತನ್ನು ಮರು ಪಾವತಿ ಮಾಡುವ ಮೂಲಕ ನಿಮ್ಮದೇ ಗ್ರಾಮದ ಸಹಕಾರ ಸಂಘದ ಅಭಿವೃದ್ದಿಗೆ ಕೈಜೋಡಿಸಬೇಕು ಎಂದು ಅಧ್ಯಕ್ಷ ಬಿ.ಎಂ.ಕಿರಣ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲದ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮೀಗೌಡ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಉಪಾಧ್ಯಕ್ಷ ಬೋಳಮಾರನಹಳ್ಳಿ ಮಂಜುನಾಥ್, ಸಂಘದ ನಿರ್ದೇಶಕ ರಾದ ನೂತನ ನಿರ್ದೇಶಕರಾಗಿ ಬೋಳಮಾರನಹಳ್ಳಿ ಲಿಂಗರಾಜು, ಅಂಚೆಬೀರನಹಳ್ಳಿ ನಂಜುಂಡೇ ಗೌಡ, ಲೋಕೇಶ್, ದೇವಮ್ಮಜವರಯ್ಯ, ದೊಡ್ಡತಾರಹಳ್ಳಿ ಮಂಜುನಾಥ್, ಐಕನಹಳ್ಳಿ ಐ.ಡಿ.ಉದಯಶಂಕರ್, ಐ.ಎಂ. ಮಂಜೇಗೌಡ, ಜೆ.ಜೆ.ಸವಿತ ನಾಗೇಶ್, ಆನೆಗೋಳ ಮಂಜುಳಮ್ಮ ರಾಮಕೃಷ್ಣೇ ಗೌಡ,ಡಾಬಾ ಶಂಕರ್, ನಂಜುಂಡೇಗೌಡ, ದೊಡ್ಡತಾರಹಳ್ಳಿ ಶಿಶುಪಾಲ್, ಕಡೆಹೆಮ್ಮಿಗೆ ಮಾಜಿ ಅಧ್ಯಕ್ಷರಾದ ಲತಾಕುಮಾರ್, ಚಿಕ್ಕತಾರಹಳ್ಳಿ ರಾಮಕೃಷ್ಣೇಗೌಡ, ಅಂಚೆ ಬೀರನಹಳ್ಳಿ ಯೋಗೇಶ್, ದೊಡ್ಡತಾರಳ್ಳಿ ಜಗನ್ನಾಥ್, ಕಿಕ್ಕೇರಿ ಹೋಬಳಿ ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ರಮೇಶ್, ಮಹಾಲಕ್ಷ್ಮಿ ವಿಶ್ವನಾಥ್, ವಡ್ಡಕಹಳ್ಳಿ ರಾಜೇಶ್, ಪೃಥ್ವಿ, ಅನಿಲ್, ಪಾಪಣ್ಣಿ ಸೇರಿದಂತೆ ಹಲವು ಗಣ್ಯರು, ಸೊಸೈಟಿ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ