ವಿವಿಧ ಕ್ಷೇತ್ರಗಳಲ್ಲಿ ಸಾಧಕ ಪ್ರತಿನಿಧಿಗಳಿಗೆ ರೋವರ್ಸ್ ವತಿಯಿಂದ ಸನ್ಮಾನ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಸಮಾಜದಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಸಾಧನೆ ಮಾಡಿ, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ರೋವರ್ಸ್ ಕ್ಲಬ್ ನ ಸದಸ್ಯರು ನಮ್ಮ ಸಂಸ್ಥೆಗೆ ಗೌರವ ತಂದಿದ್ದಾರೆ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸಿದಾಗ ಸಂಸ್ಥೆಯ ಹೆಮ್ಮೆ ಹೆಚ್ಚುವುದು ಎಂದು ರೋವರ್ಸ್ ಕ್ಲಬ್ ನ ಅಧ್ಯಕ್ಷ ಹೆಚ್.ಸಿ.ಸುರೇಶ್ ಹೇಳಿದರು.

ನಗರದ ರೋವರ್ಸ್ ಕ್ಲಬ್ ನ ಸದಸ್ಯರು ಪದಾಧಿಕಾರಿಗಳು ವಿವಿಧ ಸಂಘ ಸಂಸ್ಥೆ ಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಗಣ್ಯರಾದ ಕೆ.ಶಂಕರ್ (ಗನ್ನಿ), ಎಂ.ಕೆ.ಸುರೇಶ್ ಕುಮಾರ್ (ಚಾಣಕ್ಯ), ಎಸ್‍.ಡಿ. ಸೋಮಶೇಖರ್, ಜಿ.ವಿಜಯ್ ಕುಮಾರ್, ಪರಶುರಾಮ್, ಪಿ.ಎಲ್. ನಾಗರಾಜ್ ಪಾಟ್ನರ್, ಎಸ್.ಜಿ. ಆನಂದ್, ರಾಕೇಶ್ ಇವರಿಗೆ ರೋವರ್ಸ್ ಕ್ಲಬ್ ನಲ್ಲಿ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ  ಮಾತನಾಡಿದರು,

ಸುಮಾರು 40 ವರ್ಷಗಳ ಒಂದು ಕೌಟುಂಬಿಕ ಕ್ಲಬ್ ರೋವರ್ಸ್ ಕ್ಲಬ್ ಆಗಿದೆ. ನಮ್ಮ ಕ್ಲಬ್ ಮೂಲಕ ಸುನಾಮಿ ಸಂದರ್ಭದಲ್ಲಿ ಕೋವಿಡ್ ಹಾಗೂ ಬೇರೆ ಬೇರೆ ಸಂದರ್ಭಗಳಲ್ಲಿ ಹಲವಾರು ಸಮಾಜ ಮುಖಿ ಸೇವಾ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಹೆಚ್.ಕೃಷ್ಣ, ಕಾರ್ಯದರ್ಶಿ ಅ.ಮಾ.ಪ್ರಕಾಶ್, ಎಂ.ಬಿ.ವಿನಾಯಕ, ಎಸ್.ಚಿನ್ನಪ್ಪ, ಅಗಡಿ ಮಹೇಶ್, ಎಂ.ಆರ್.ಬಸವರಾಜ್, ಎಸ್.ಸುನಿಲ್ ಕುಮಾರ್, ಮಹಾದೇವಾ ಚಾರ್, ಮಾಜಿ ಅಧ್ಯಕ್ಷ ಕೆ.ಸಿ.ಮಲ್ಲಿಕಾರ್ಜುನ್, ಹಿರಿಯ ಸದಸ್ಯರುಗಳಾದ ಗೋವಿಂದಪ್ಪ, ಜಿ.ಕೆ.ಪ್ರಕಾಶ್, ರಾಜಶೇಖರ್, ದಿನೇಶ್, ಈಶ್ವರಪ್ಪ, ಮಾಜಿ ಖಜಾಂಚಿ ಎ.ಹೆಚ್. ಸುನಿಲ್ ಹಾಗೂ ಸದಸ್ಯರಿದ್ದರು. . 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು