ವಿಜಯ ಸಂಘರ್ಷ ನ್ಯೂಸ್
ಕೆ ಆರ್ ಪೇಟೆ: ಪಟ್ಟಣದ ನಾಗ ಮಂಗಲ ರಸ್ತೆಯ ಶ್ರೀ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಮಹಿಳಾ ಪ್ರಧಾನ ಚಲನಚಿತ್ರ ವಾಂಟೆಡ್ ಕನ್ನಡ ಚಲನಚಿತ್ರದ ಶೂಟಿಂಗ್ ಗೆ ಸಮಾಜ ಸೇವಕ ಆರ್ ಟಿ ಒ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಕ್ಲಾಪ್ ಮಾಡುವುದರ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿ ಶುಭ ಕೋರಿದರು.
ಅದಕ್ಕೂ ಮುನ್ನ ವಾಂಟೆಡ್ ಚಲನ ಚಿತ್ರದ ನಿರ್ಮಾಪಕರು, ನಿರ್ದೇಶಕರು, ಕೋರಿಯಾಗ್ರಾಫರ್,ಮ್ಯೂಸಿಕ್ ಡೈರೆಕ್ಟರ್ ಹಾಗೂ ಚಿತ್ರತಂಡ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಮ್ಮ ಸಿನಿಮಾಕ್ಕೆ ಯಾವುದೇ ವಿಘ್ನ ಬಾರ ದಂತೆ ತಡೆಯಲು ದೇವರಲ್ಲಿ ಪ್ರಾರ್ಥಿಸಿದರು.
ಚಿತ್ರೀಕರಣಕ್ಕೆ ಚಾಲನೆ ಮಾತನಾಡಿದ ಆರ್ ಟಿ ಒ ಸಂಘದ ರಾಜ್ಯಾದ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸ್ಟಾರ್ ಗಳ ಚಲನಚಿತ್ರ ಗಳನ್ನು ಮಾತ್ರ ಅವರವರ ಅಭಿಮಾನಿ ಗಳು ವೀಕ್ಷಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಕನ್ನಡ ಪ್ರೇಕ್ಷಕರು ಅಭಿಮಾನಿಗಳು ಕನ್ನಡ ಚಲನಚಿತ್ರ ಗಳನ್ನು ಸಿನಿಮಾ ಮಂದಿರದಲ್ಲಿ ವೀಕ್ಷಿಸಿದಾಗ ಮಾತ್ರ ಕನ್ನಡ ಚಿತ್ರರಂಗ ಬೆಳೆಯಲು ಸಾಧ್ಯ ವಾಗುತ್ತದೆ.ಇಡೀ ಚಿತ್ರತಂಡ ಕಷ್ಟ ಪಟ್ಟು ಪುಟ್ಟ ಕಲಾವಿದ ರನ್ನು ಸಿನಿಮಾದಲ್ಲಿ ಹಾಕಿಕೊಂಡು ಕೋಟ್ಯಾಂತರ ರೂಪಾಯಿಗಳ ಬಜೆಟ್ ಅನ್ನು ನಿರ್ಮಾಪಕರು ಸಿನಿಮಾ ಮಾಡಿರುತ್ತಾರೆ. ಅದನ್ನು ತೆರೆಯ ಪರದೆಯ ಮೇಲೆ ವೀಕ್ಷಕರು ಪ್ರೇಕ್ಷಕರು ಸಿನಿಮಾವನ್ನು ನೋಡ ದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಕಲಾವಿದರನ್ನು ಪ್ರೋತ್ಸಾಹಿಸಬೇಕು.
ಸ್ಟಾರ್ ಸಿನಿಮಾಗಳಷ್ಟೆ ನೂತನ ಕಲಾವಿದರ ಸಿನಿಮಾಗಳನ್ನು ಕನ್ನಡ ಅಭಿಮಾನಿಗಳು ಪ್ರೋತ್ಸಾಹ ಮಾಡಿ ದಾಗ ಮಾತ್ರ ಕನ್ನಡ ಚಲನಚಿತ್ರಗಳಿಗೆ ಬೆಳೆಯಲು ಉಳಿಯಲು ಸಾಧ್ಯವಾಗು ತ್ತದೆ ಎಂದು ತಿಳಿಸಿದರು.
ಶ್ರೀ ಕುವೆಂಪು ಕನ್ನಡ ಗೆಳೆಯರ ಸೇವಾ ಟ್ರಸ್ಟ್ ಅಧ್ಯಕ್ಷ ಕೆಬಿಸಿ ಮಂಜುನಾಥ್ ಮಾತನಾಡಿ ಪರಭಾಷೆಯ ಚಲನಚಿತ್ರ ಗಳ ಪ್ರಭಾವದಿಂದ ಕನ್ನಡ ಚಲನಚಿತ್ರ ಗಳನ್ನು ನೋಡುವವರ ಸಂಖ್ಯೆ ಇಳಿಮುಖವಾಗುತ್ತಿದೆ.ಇದು ಕನ್ನಡ ಚಲನಚಿತ್ರಗಳ ಮೇಲೆ ಪರಿಣಾಮ ಬೀರುತ್ತದೆ. ಕನ್ನಡ ಅಭಿಮಾನಿಗಳು ಮೊದಲಿಗೆ ಕನ್ನಡ ಚಲನಚಿತ್ರಗಳನ್ನು ಗೌರವಿಸಬೇಕು ಪ್ರೀತಿಸಬೇಕು. ಸಿನಿಮಾ ಮಂದಿರದಲ್ಲಿ ಬಂದು ನೋಡಬೇಕು. ನೂತನ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ವಾಂಟೆಡ್ ಸಿನಿಮಾ ಉತ್ತಮವಾಗಿ ಮೂಡಿಬಂದು ಆದಷ್ಟು ಬೇಗ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡು ವಾಂಟೆಡ್ ಸಿನಿಮಾ ದಲ್ಲಿ ಅಭಿನಯಿಸಿದ ಎಲ್ಲಾ ಕಲಾ ವಿದರಿಗೆ ಶುಭ ವಾಗಲಿ ಅವರಿಗೆಲ್ಲ ಮುಂದೆ ಸಿನಿಮಾಗಳಲ್ಲಿ ಉತ್ತಮ ಅವಕಾಶಗಳು ದೊರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಾಂಟೆಡ್ ಸಿನಿಮಾ ನಿರ್ಮಾಪಕಿ ಲಕ್ಷ್ಮೀ ಜಯಣ್ಣ,ಡೈರೆಕ್ಟರ್ ವಿನೋದ್ ಕುಮಾರ್, ವಿದ್ಯಾಶ್ರೀ, ನಾಗೇಶ್, ಕ್ಯಾಮರಾ ಜೀವನ್ ಗೌಡ,ಮ್ಯೂಜಿಕ್, ಧ್ರುವ,ಕೋರಿಯಾ ಗ್ರಾಫರ್ ಶಶಿ, ತಾರಾಗಣದಲ್ಲಿರುವ ಅನೇಕ ಕಲಾವಿದರು ಉಪಸ್ಥಿತರಿದ್ದರು.
Tags
ಕೆ ಆರ್ ಪೇಟೆ ವರದಿ