ಒಂದು ಕೆರೆ ಇಡೀ ಗ್ರಾಮದ ಜೀವಾಳ: ಶಾಸಕ ಹೆಚ್.ಟಿ ಮಂಜು

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ಒಂದು ಗ್ರಾಮದ ಕೆರೆ ಇಡೀ ಗ್ರಾಮದ ಜೀವಾಳವೇ ಆಗಿರುತ್ತದೆ. ಕೆರೆ ತುಂಬಿದಾಗ ಸುತ್ತಮುತ್ತಲ ಗ್ರಾಮಗಳ ಜಮೀನು ಗಳಲ್ಲಿ ಅಂತರ್ಜಲ ಹೆಚ್ಚಳ ವಾಗುತ್ತದೆ. ಅವುಗಳ ಕಾಮಗಾರಿ ನಡೆದರೆ ನೀರು ಸಂಗ್ರಹಣೆಯಾಗಿ ರೈತರಿಗೆ ಅನುಕೂಲ ಆಗುತ್ತದೆ ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.

ತಾಲ್ಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 80 ಲಕ್ಷ ರೂ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಹಾಗೂ ತೇಗನಹಳ್ಳಿ ಗ್ರಾಮದ ಕೆರೆ ಅಭಿವೃದ್ಧಿಗೆ ಸುಮಾರು 45ಲಕ್ಷ ರೂ ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಹಾಗೂ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದ ಗ್ರಾಮೀಣ ಭಾಗದ ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳ ಬೇಕೆಂದರೆ ಕೆರೆಗಳಿಗೆ ಕಾಯಕಲ್ಪ ನೀಡುವ ಅಗತ್ಯ. ಹಾಗಾಗಿ ಕೆರೆ ಏರಿ ಬಲವರ್ಧನೆ ಜಂಗಲ್‌ಕಟಿಂಗ್, ಕೋಡಿಹಳ್ಳದಲ್ಲಿ ಬಾಕ್ಸ್ ಲೈನಿಂಗ್ ಕಾಮಗಾರಿ ಕೆರೆ ಅಭಿವೃದ್ಧಿ ಕಾಮಗಾರಿ ಯಲ್ಲಿ ಸೇರಿದೆ ಎಂದ ಅವರು ಪೂರ್ವಜರಿಂದ ನಿರ್ಮಿಸಲ್ಪಟ್ಟ, ಊರ ಮಂದಿಗೆ ನೀರಿನ ಪ್ರಮುಖ ಮೂಲ ವಾಗಿದ್ದ ಕೆರೆಗಳು ಹೂಳಿನಿಂದ ತುಂಬಿ, ಒತ್ತುವರಿಯ ದವಡೆಗೆ ಸಿಲುಕಿ ಕಣ್ಮರೆ ಯಾಗಿವೆ. ಅವುಗಳನ್ನು ಹುಡುಕಾಡಿ ಒತ್ತುವರಿ ತೆರವುಗೊಳಿಸಿ ಊರವರ ಸಹಭಾಗಿತ್ವ ದೊಂದಿಗೆ ಮತ್ತೆ ಅವುಗಳಿಗೆ ಗತವೈಭವವನ್ನು ತಂದುಕೊಟ್ಟು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನುಕೈಗೊಳ್ಳುತ್ತೇವೆ. ಕೆರೆಯ ಅಗತ್ಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಅವುಗಳ ರಕ್ಷಣೆಯ ಜವಾಬ್ದಾರಿಯನ್ನು ಊರಿನ ಮಂದಿಗೆ ವಹಿಸಿಕೊಳ್ಳಬೇಕು. 

ಅಳಿವಿನಂಚಿನಲ್ಲಿದ್ದ ಕೆರೆಗಳಿಗೆ ಮರುಜೀವ ನೀಡುವುದಕ್ಕೆ ಶ್ರಮವ ಹಿಸುತ್ತೇವೆ ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ರೈತರಿಗೆ ಅನೂಕೂಲ ಮಾಡಿಕೊಡಬೇಕು ಎಂದು ಗುತ್ತಿಗೆದಾರ ಕುಮಾರ್ ಮತ್ತು ಅಂಬಿಗರಹಳ್ಳಿ ನವೀನ್ ಅವರಿಗೆ ಎಚ್ಚರಿಕೆ ನೀಡಿ ಗುಣಮಟ್ಟ ಕಾಮಗಾರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ನಿರ್ಮಲೇಶ್, ಹರಳಹಳ್ಳಿ ಗ್ರಾ.ಪಂ ಅಧ್ಯಕ್ಷ ಬ್ಯಾಲದಕೆರೆ ಅಶೋಕ್, ಸದಸ್ಯ ರಾಯಸಮುದ್ರ ಯೋಗೇಶ್ ಆರ್. ಕೆ, ಶೋಭ ಚಂದ್ರು, ಹರಳಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಭೈರಪುರ ಹರೀಶ್,ಹಿರೇಗೌಡ ಪ್ರೇಮ್ ಕುಮಾರ್, ತಿಮ್ಮಯ್ಯ,ಮಂಜುಳ, ಉಮೇಶ್, ಮಹೇಶ್, ನಂದಾ, ಆಟೋ ಯೋಗೇಶ್, ಸತೀಶ್, ರಮೇಶ್,ಪಿಡಿಓ ಬಸವಶೆಟ್ಟಿ,ಶಾಸಕರ ಆಪ್ತ ಸಹಾಯ ಅರಳಕುಪ್ಪೆ ಪ್ರತಾಪ್, ಸೇರಿದಂತೆ ಉಪಸ್ಥಿತರಿದ್ದರು.

*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು