ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲೂಕಿನ ಹಲವೆಡೆ ಏ.20 ರ ಸಂಜೆ ಗುಡುಗು, ಗಾಳಿ ಸಹಿತ ಮಳೆಯಾಗಿದೆ.
ನಗರದ ನ್ಯೂಟೌನ್ ಸೇರಿದಂತೆ ಬಹುತೇಕ ಎಲ್ಲೆಡೆ ಮಳೆ ಸುರಿದಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ನಾಗರಿಕರಿಗೆ ನಿಟ್ಟುಸಿರು ಬಿಡುವಂತಾಗಿದೆ. ಸಂಜೆ ಮೋಡ ಕವಿದ ವಾತಾವರಣ ಗಾಳಿ, ಗುಡುಗು ಸಹಿತ ಮಳೆ ಬೀಳಲಾರಂಭಿಸಿತು.
ಸುಮಾರು ಎರಡು ಗಂಟೆಗಳ ಕಾಲ ಮಳೆ ಸುರಿಯಿತು. ಕೆಲ ದಿನಗಳ ನಂತರ ಬಿದ್ದ ಮಳೆಯಿಂದ ನಾಗರೀಕ ರಲ್ಲಿ ನಿರಾಳ ಭಾವ ಮೂಡಿಸಿತ್ತು. ಕಾದ ಕಾವಲಿಯಂತಾಗಿದ್ದ ಇಳೆ ತಂಪಾಗು ವಂತಾಯಿತು.
Tags
ಭದ್ರಾವತಿ ಮಳೆ