ಭದ್ರಾವತಿ-ಮಗ ಶವವಾಗಿ ಪತ್ತೆ ತಂದೆ ನೀರುಪಾಲು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲ್ಲೂಕಿನ ಬಿಆರ್ ಪಿ ಸಮೀಪದ ಭದ್ರಾ ನದಿಗೆ ಇಳಿದಿದ್ದ ಮಗನನ್ನ ರಕ್ಚಿಸಲು ಹೋದ ತಂದೆಯೂ ಸಹ ನೀರುಪಾಲಾಗಿ ದ್ದಾರೆ. ಮಗ ಶವವಾಗಿ ಪತ್ತೆಯಾದರೆ ತಂದೆಯ ಬಗ್ಗೆ ಸುಳಿವು ಸಿಕ್ಕಿಲ್ಲ. 

ನಗರದ ಭೂತನಗುಡಿ ನಿವಾಸಿ ಹಫೀಜ್ ಜಾಬರ್ ಮತ್ತು ಅವರ 14 ವರ್ಷದ ಪುತ್ರ ಜಾವದ್ ಮತ್ತು ಕುಟುಂಬ ಬಿಆರ್ ಪಿಗೆ ವಿಹಾರಕ್ಕೆ ತೆರಳಿದ್ದರು. ಊಟ ಮುಗಿಸಿ ಪುತ್ರ ಜಾವಾದ್ ಹಿನ್ನೀರಿನಲ್ಲಿ ಇಳಿದಿದ್ದಾನೆ. 

ನೀರಿನ‌ ಅಳತೆಯನ್ನ‌ ಅಂದಾಜಿಸದ ಜಾವದ್ ನೀರು ಪಾಲಾಗಿದ್ದಾನೆ. ಆತನನ್ನ ರಕ್ಷಿಸಲು ತಂದೆ ಜಾಬರ್ ನೀರು ಪಾಲಾಗಿದ್ದಾರೆ. ಎಸ್‌ಎಸ್‌ ಎಲ್‌ಸಿ ವಿದ್ಯಾರ್ಥಿಯಾದ ಜಾವದ್ ಶವವಾಗಿ ಪತ್ತೆಯಾದರೆ ತಂದೆ ಜಾಬರ್ ನ ಹುಡುಕಾಟ ನಡೆದಿದೆ. 

ಘಟನೆಯ ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಇಂದು ಸಹ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು