ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕಿನ ಸಿದ್ದಾಪುರ ತಾಂಡಾದ ಭದ್ರಾ ಎಡ ದಂಡೆ ಚಾನಲ್ ಬಳಿ ಅನಾಥ ಗಂಡಸಿನ ಶವ ದೊರೆತಿದ್ದು ಸುಮಾರು 40-45 ವರ್ಷದವನಾಗಿದ್ದು, ಸಾದಾರಣ ಮೈಕಟ್ಟು, ಕೋಲುಮುಖ, ತಲೆಯಲ್ಲಿ ಸುಮಾರು 2 ಇಂಚು ಕಪ್ಪು ಕೂದಲು ಇದ್ದು ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಬಿಳಿ ಬಣ್ಣದ ಬನಿಯನ್ ಮೆರೂನ್ ಬಣ್ಣದ ಚಡ್ಡಿ ಧರಿಸಿದ್ದು ಮುಖ, ತುಟಿ, ಗಲ್ಲ, ಕಿವಿ, ಕಣ್ಣುಗಳನ್ನು ಯಾವುದೊ ಜಲಚರಗಳು ತಿಂದಿರುತ್ತೆ.
ಈತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಅಥವಾ ಗುರುತು ಪತ್ತೆ ಆದಲ್ಲಿ ಮಾಹಿತಿಯನ್ನು ಪಿಎಸ್ಐ ನ್ಯೂಟೌನ್ ಪೊಲೀಸ್ ಠಾಣೆ ನೀಡಲು ಕೋರಿದೆ.