ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಪ್ರಶಸ್ತಿಗಳು ಜವಾಬ್ಧಾರಿ ಹೆಚ್ಚಿಸುತ್ತವೆ. ಸರ್ಕಾರಿ ಪ್ರಾಥಮಿಕ ಶಾಲಾಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
ಅವರು ಯರೇಹಳ್ಳಿ ಗ್ರಾಮದಲ್ಲಿ ಹಮ್ಮಿ ಕೊಂಡಿದ್ದ ಅಕ್ಷರ ಮಾತೆ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ಸುಮಾ ರವರಿಗೆ ಅಭಿನಂದನಾ ಸಮಾರಂಭ ದಲ್ಲಿ ಮಾತನಾಡಿದರು.
ಪ್ರಶಸ್ತಿ ಬಂದಾಗ ಹಿಗ್ಗದೆ ಬರದಿದ್ದಾಗ ಕುಗ್ಗದೆ ಕಾರ್ಯ ನಿರ್ವಹಿಸಬೇಕು.ಪ್ರಶಸ್ತಿಗಳು ಬಂದಾಗ ನಿಜಕ್ಕೂ ಜವಾಬ್ಧಾರಿಗಳು ಹೆಚ್ಚಾಗಿ ಇನ್ನಷ್ಟು ಸಾಧನೆಗೆ ಪ್ರೇರಣೆ ನೀಡುತ್ತವೆ. ಹಾಗಾಗಿ ಆತ್ಮ ಸಾಕ್ಷಿಯಾಗಿ, ಪ್ರಾಮಾಣಿಕ ವಾಗಿ ನಿಷ್ಠೆ ಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಮನ ಮೆಚ್ಚುವಂತೆ ಕೆಲಸ ಮಾಡಬೇಕು. ಎಂದು ಹೇಳುತ್ತಾ ಶಿಕ್ಷಕಿ ಸುಮಾ 25 ವರ್ಷ ಗಳ ಸೇವೆ ಸಲ್ಲಿಸಿದ್ದು ಮಕ್ಕಳೊಂದಿಗೆ ಮಕ್ಕಳಾಗಿ ಸದಾ ಕಲಿಕೆ ಯಲ್ಲಿ ತೊಡಗಿಸಿ ಕೊಳ್ಳುತ್ತಿದ್ದು ಅವರಿಗೆ ಪ್ರಶಸ್ತಿ ಬಂದಿದ್ದು ಶಾಲೆಗೆ ಮತ್ತೊಮ್ಮೆ ಕಿರೀಟ ತೊಡಿಸಿ ದಂತಾಗಿದೆ. ಎಲ್ಲ ಶಿಕ್ಷಕರು ಉತ್ತಮ ಸೇವೆ ಸಲ್ಲಿಸುತ್ತಿದ್ದು ಶಾಲೆ ಪ್ರಗತಿ ಪಥ ದಲ್ಲಿದ್ದು ಎಲ್ಲರೂ ಮಕ್ಕಳ ಕಲಿಕೆ ಉತ್ತಮ ಪಡಿಸಲು ಶ್ರಮಿಸಬೇಕು ಪ್ರಶಸ್ತಿ ವಿಜೇತ ಶಿಕ್ಷಕರು ಈ ನಿಟ್ಟಿನಲ್ಲಿ ಎಲ್ಲರನ್ನೂ ಒಟ್ಟಾಗಿ ತೆಗೆದು ಕೊಂಡು ಹೋಗಬೇಕು ಶಾಲಾಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಕರೆ ಕೊಟ್ಟರು.
ಅರಿವು ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಲೋಕೇಶ್, ಸದಸ್ಯ ವರುಣ, ಶಿಕ್ಷಕರಾದ ವಾಣಿಶ್ರೀ, ಜ್ಯೋತಿ, ವೀಣಾ, ಶಂಕರ್, ಬೇಸಿಗೆ ಶಿಬಿರ ದ ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಪೋಷಕರು ಹಾಜರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಮಾ ರವರು ಮಕ್ಕಳೇ ನನ್ನ ಆಸ್ತಿ ಅವರು ಕಲಿತರೆ ಅದೇ ನನಗೆ ಹೆಮ್ಮೆ. ಶಾಲೆಗೆ ಹೆಸರು ತರುವ ಪ್ರಯತ್ನ ದಲ್ಲಿ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ಜೊತೆಗೆ ಹಾಗೂ ಗ್ರಾಮ ದ ಶಿಕ್ಷಣ ಆಸಕ್ತಿಯುಳ್ಳ ವರ ಜೊತೆಗೆ ನಿರಂತರ ಪ್ರಯತ್ನ ಪ್ರಾಮಾಣಿಕ ವಾಗಿ ಮಾಡುವೆ ಎಂದರು.ಅರಿವು ಕೇಂದ್ರದ ಮೇಲ್ವಿಚಾರಕಿ ಮಾಲಾ ಸ್ವಾಗತಿಸಿ ನಿರೂಪಿಸಿದರು.
Tags
ಭದ್ರಾವತಿ ಸುದ್ದಿ