ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಹಬ್ಬ-ಹರಿದಿನಗಳು, ಜಾತ್ರೆ- ರಥೋತ್ಸವಗಳು ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ ಗಳಾಗಿದ್ದು ಇವುಗಳನ್ನು ಉಳಿಸಿಬೆಳೆಸಿ ಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.
ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಣ್ಣೇಚಾಕನಹಳ್ಳಿ ಗ್ರಾಮದಲ್ಲಿ ಶ್ರೀ ಅಂಕ ಲಿಂಗೇಶ್ವರ ಉತ್ಸವ ಮತ್ತು ರಂಗದ ಹಬ್ಬದ ಹಿನ್ನಲೆ ಗ್ರಾಮದೇವರ ವಿಶೇಷ ಪೂಜಾ ಕಾರ್ಯಕ್ರಮದ ಭಾಗವಹಿಸಿ ಮಾತನಾಡಿದರು. ಹಬ್ಬ-ಹರಿದಿನಗಳು, ಜಾತ್ರೆ-ರಥೋತ್ಸವ ಗಳು ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿ ಬಿಂಬಗಳಾಗಿದ್ದು ಇವುಗಳನ್ನು ಉಳಿಸಿಬೆಳೆಸಿ ಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದರೆ ಇತ್ತೀಚೆಗೆ ಸಿನಿಮಾ ಮತ್ತು ಟಿವಿ ಧಾರಾವಾಹಿಗಳ ಹಾವಳಿಯಿಂದ ಜಾನಪದ ಸಂಸ್ಕೃತಿಯನ್ನು ಸಾರುವ ಕಾರ್ಯ ಕ್ರಮಗಳು ಕಡಿಮೆಯಾಗುತ್ತಿ ರುವ ಈ ಸಂದರ್ಭದಲ್ಲಿ ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ. ಜಾತ್ರೆ ಉತ್ಸವಗಳು ನಗರ ಪ್ರದೇಶಗಲ್ಲಿ ಕಣ್ಮರೆಯಾಗಿವೆ. ಗ್ರಾಮೀಣ ಪ್ರದೇಶ ದಲ್ಲಿ ಇನ್ನೂ ಸಹ ಜನಪದ ಸೊಗಡು ಉಳಿದುಕೊಂಡಿದೆ. ಇದನ್ನು ಪ್ರೋತ್ಸಾಹಿಸಿ ಸಂರಕ್ಷಣೆ ಮಾಡಿಕೊಳ್ಳ ದಿದ್ದಲ್ಲಿ ನಮ್ಮ ಸಂಸ್ಕೃತಿಕ ಪ್ರತಿಬಿಂಬ ಗಳು ನಾಶವಾಗುವ ಅಪಾಯ ಇದೆ. ಇಂತಹ ಕಲೆಗಳನ್ನು ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯ ಮಾಡಿದರು.
ರಂಗಸ್ಥಳದಲ್ಲಿ ಗ್ರಾಮದ ಆರಾಧ್ಯ ದೈವ ಶ್ರೀ ಅಂಕಲಿಂಗೇಶ್ವರ ಸ್ವಾಮಿಯ ಪೂಜಾ ಮಹೋತ್ಸವ, ನಂತರ ದೇವಸ್ಥಾನ ಮುಂಭಾಗದ ರಂಗದಲ್ಲಿ ಜಾತಿಭೇದ, ವಯಸ್ಸಿನ ಅಂತರವಿಲ್ಲದೆ ಗ್ರಾಮದ ಜನರು ತಮಟೆಯ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ನಮ್ಮ ಪೂರ್ವ ಜರು ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ಮೆರೆದರು. ರಂಗದ ಹಬ್ಬದ ಸಂಭ್ರಮದಲ್ಲಿ ಗ್ರಾಮದ ಜನತೆಯೊಂದಿಗೆ ಸುತ್ತಮುತ್ತಲಿನ ಗ್ರಾಮದ ಜನರೂ ಪಾಲ್ಗೊಂಡಿದ್ದರು. ಗ್ರಾಮದ ರಾಜಬೀದಿಗಳು ವಿದ್ಯುತ್ ದೀಪಾಲಂಕಾರ ದಿಂದ ಕಂಗೊಳಿಸುತ್ತು ದ್ದವು ಗ್ರಾಮದ ಮುಖಂಡರು ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಕಾಂತರಾಜು, ಮುಖಂಡರು ಗಳಾದ ತಮ್ಮೇಗೌಡ, ಚಂದ್ರಹಾಸ, ಸಂತೋಷ, ಗುರು, ದಿನೇಶ್, ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ