ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮೇ 1ರಂದು ಕಾರ್ಮಿಕರ ಹಕ್ಕುಗಳು ಮತ್ತು ಸಾಧನೆಗಳನ್ನು ಗೌರವಿಸುವ ದಿನವಾಗಿದೆ ಎಂದು ದಯಾಸಾಗರ್ ಟ್ರಸ್ಟ್ ಅಧ್ಯಕ್ಷ ಮೋಸಸ್ ಹೇಳಿದರು.
ಅವರು ಗುರುವಾರ ನಗರದ ನ್ಯೂಟೌನ್ ತಮಿಳು ಶಾಲೆ ಆವರಣ ದಲ್ಲಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಕಾರ್ಮಿಕರ ದಿನಾಚರಣೆಯ ಅಂಗವಾಗಿ ವಿವಿಧ ಭಾಗಗಳಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸಿ ಮಾತನಾಡಿದರು. ಅಂಬ್ಯುಲೆನ್ಸ್ ಚಾಲಕರು, ಶವಗಳಿಗೆ ಗುಂಡಿ ತೋಡುವ ಮತ್ತಿತರೆ ಭಾಗ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಪಾಡು ಹೇಳತೀರದು. ಇಂತಹ ಕಾರ್ಮಿಕರಿಗೆ ಗೌರವಿಸುವುದು ಕಾರ್ಮಿಕರ ದಿನಾಚರಣೆಯ ಅರ್ಥಕಲ್ಪಿಸುತ್ತದೆ ಎಂದರು.
ಸಮಾಜ ಸೇವಕ ಪ್ರಸಾದ್ ಮಾತನಾಡಿ, ಅಂಬ್ಯುಲೆನ್ಸ್ ಚಾಲಕರಿಗೆ ಒಂದು ನಿರ್ದಿಷ್ಟ ಸಮಯ ಇರುವು ದಿಲ್ಲ. ಕ್ಲಿಷ್ಟ ಪರಿಸ್ಥಿತಿಯಲ್ಲಿ ರೋಗಿಗಳ ಹಾಗೂ ಕುಟುಂಬಸ್ಥರ ಪಾಲಿಗೆ ಚಾಲಕರು ದೈವ ಸ್ವರೂಪಿಗಳಾಗಿರು ತ್ತಾರೆ. ಇಂತಹ ಕ್ಲಿಷ್ಟ ಸೇವೆಯ ಚಾಲಕ ರನ್ನು ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಟ್ರಸ್ಟ್ ಗುರುತಿಸಿ ಸನ್ಮಾನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಅಭಿ ಮಾತನಾಡಿ, ಸಮಾಜದಲ್ಲಿ ಕಟ್ಟಕಡೆಯ ಕರ್ತವ್ಯ ನಿರ್ವಹಿಸುತ್ತಿ ರುವವರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಸಂತಸ ತಂದಿದೆ ಎಂದರು.ಸರಕಾರಗಳು ಕಾರ್ಮಿಕರ ಅಭಿವೃದ್ಧಿಗಾಗಿ ಅನೇಕ ಯೋಜನೆ ಗಳನ್ನು ಅನುಷ್ಠಾನಗೊಳಿಸಿದ್ದು ಅದರ ಪ್ರಯೋಜನ ಗಳನ್ನು ಪ್ರತಿಯೊಬ್ಬ ಕಾರ್ಮಿಕರು ಪಡೆದು ಕೊಳ್ಳುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರು.
ನಗರಸಭಾ ಮಾಜಿ ಸದಸ್ಯ ಫ್ರಾನ್ಸಿಸ್ ಹಾಗೂ ಸಂಯುಕ್ತ ಕ್ರೈಸ್ತ ಸಂಘದ ಅಧ್ಯಕ್ಷ ಸೆಲ್ವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಗರ ಸಭಾ ಸದಸ್ಯ ಐ.ವಿ. ಸಂತೋಷ್, ದಸಂಸ ಮುಖಂಡ ದಾಸ್ ಸೇರಿದಂತೆ ಟ್ರಸ್ಟ್ ಪದಾಧಿಕಾರಿ ಗಳು, ಸದಸ್ಯರು ಭಾಗವಹಿಸಿದ್ದರು.
ಇದೆ ಸಂದರ್ಭ ದಲ್ಲಿ ವಿಐಎಸ್ಎಲ್ ಆಸ್ಪತ್ರೆ ಅಂಬ್ಯುಲೆನ್ಸ್ ವಾಹನ ಚಾಲಕ ಸಂತೋಷ್, ಸಾರ್ವಜನಿಕ ಆಸ್ಪತ್ರೆಯ ಬಾಬು, ಮುಕ್ತಿ ವಾಹನ ಚಾಲಕ ಮಂಜು ಹಾಗೂ ಪ್ರತಾಪ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.