ವಿಜಯ ಸಂಘರ್ಷ
ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರಾಜ್ಯ ಜೆಡಿಎಸ್ ಯುವ ಘಟಕ ಪ್ರಧಾನ ಕಾರ್ಯದರ್ಶಿ ವಕೀಲ ಕುರುಬಹಳ್ಳಿ ನಾಗೇಶ್, ಉಪಾಧ್ಯಕ್ಷ ರಾಗಿ ಸುಧಾಮಣಿ ಶಿವರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನ ಬಯಸಿ ಕುರುಬಹಳ್ಳಿ ನಾಗೇಶ್, ಉಪಾಧ್ಯಕ್ಷ ಸ್ಥಾನ ಬಯಸಿ ಸುಧಾಮಣಿ ಶಿವರಾಜ್ ಹೊರತು ಪಡಿಸಿ ಉಳಿದ ನಿರ್ದೇಶಕರಿಂದ ನಾಮಪತ್ರ ಸಲ್ಲಿಸಿದ ಹಿನ್ನಲೆ.ಅಧ್ಯಕ್ಷ ಸ್ಥಾನಕ್ಕೆ ವಕೀಲ ಕುರುಬಹಳ್ಳಿ ನಾಗೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಸುಧಾಮಣಿ ಶಿವರಾಜ್ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿ ಕಾರಿ ಘೋಷಿಸಿದರು.
ನೂತನ ಅಧ್ಯಕ್ಷ ವಕೀಲ ಕುರುಬಹಳ್ಳಿ ನಾಗೇಶ್ ಮಾತನಾಡಿ ನಮ್ಮ ನಾಯಕ ರಾದ ಶಾಸಕ ಹೆಚ್.ಟಿ ಮಂಜು ನೇತೃತ್ವದಲ್ಲಿ ಹಾಗೂ ಜೆಡಿಎಸ್ ಬೆಂಬಲಿತ ನಿರ್ದೇಶಕರ ಸಹಕಾರ ದಿಂದ ಸರ್ವಾನುಮತದಿಂದ ಅವಿ ರೋಧವಾಗಿ ನಾನು ಅಧ್ಯಕ್ಷರಾಗಿದ್ದೇನೆ ಅದಕ್ಕೆ ಹಾಗೂ ನನ್ನ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಅಭೂತಪೂರ್ವ ಗೆಲುವಿಗೆ ಸಹಕಾರ ನೀಡಿದ ಸೊಸೈಟಿ ವ್ಯಾಪ್ತಿಯ ಮತದಾರರ ಋಣಿಯಾಗಿ ನಮ್ಮ ಶಾಸಕ ಹೆಚ್.ಟಿ ಮಂಜು ಅವರ ಸಲಹೆ, ಸಹಕಾರ ಪಡೆದು ಸಂಘದ ವ್ಯಾಪ್ತಿಗೆ ಬರುವ ಪ್ರತಿಯೊಬ್ಬ ಅರ್ಹ ರೈತರಿಗೂ ಸರ್ಕಾರದ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಜನ ಸ್ನೇಹಿ ಆಡಳಿತ ನೆರವೇರಿಸಿ ಸಂಘದ ಅಭಿವೃದ್ಧಿಗೂ ಪ್ರಾಮಾಣಿಕವಾಗಿ ಶ್ರಮವಿಸುತ್ತೇನೆ ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರನ್ನು ಅಭಿನಂದಿಸಿ ತಾ.ಪಂ ಮಾಜಿ ಸದಸ್ಯ ಬೂಕನಕೆರೆ ಹುಲ್ಲೆಗೌಡ ಮಾತನಾಡಿ ಗಂಜಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರ ಸ್ಥಾನಕ್ಕೆ ಸೊಸೈಟಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಅಭೂತ ಪೂರ್ವ ಜಯಗಳಿಸಲು ಹಗಲು -ಇರುಳು ಪ್ರಮುಖ ಪಾತ್ರ ವಹಿಸಿದ ರಾಜ್ಯ ಜೆಡಿಎಸ್ ಯುವ ಘಟಕ ಪ್ರಧಾನ ಕಾರ್ಯದರ್ಶಿ ವಕೀಲ ಕುರುಬಹಳ್ಳಿ ನಾಗೇಶ್ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ನಿಜಕ್ಕೂ ಸಂತಸದ ವಿಶೇಷ.ಅದರಂತೆ ನೂತನ ಉಪಾಧ್ಯಕ್ಷೆ ಹಾಗೂ ಸರ್ವ ನಿರ್ದೇಶಕ ರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬೇಧ ಮರೆತು ಹಿರಿಯರ ಸಲಹೆ ಸಹಕಾರ ಪಡೆದು ಸಂಘದ ಹಾಗೂ ವ್ಯಾಪ್ತಿಗೆ ಬರುವ ರೈತರ ಶ್ರೇಯೋಭಿ ವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಮತದಾರರು ನೀಡಿರುವ ಮತಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕೃತಜ್ಞತೆ ಸಲ್ಲಿಸಬೇಕು ಎಂದು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಕಿವಿಮಾತು ತಿಳಿಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷ ಘೋಷಣೆ ಯಾಗುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಬಂಣ್ಣೆನಹಳ್ಳಿ ಧನಂಜಯ್, ಗಂಜಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುದುಗೆರೆ ಪರಮೇಶ್, ಬೂಕನಕೆರೆ ಗ್ರಾ. ಪಂ ಅಧ್ಯಕ್ಷ ಶ್ಯಾಮ್ ಪ್ರಸಾದ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಿಕ್ಕಗಾಡಿಗನ ಹಳ್ಳಿ ಸೋಮಶೇಖರ್, ಸಂಘದ ಮಾಜಿ ಅಧ್ಯಕ್ಷ ರಾಮಕೃಷ್ಣ ಗೌಡ, ಸೊಸೈಟಿ ನೂತನ ಉಪಾಧ್ಯಕ್ಷೆ ಸುಧಾಮಣಿ ಶಿವರಾಜ್, ನಿರ್ದೇಶಕ ರಾದ ಪತ್ರ ಬರಹಗಾರ ಮುದುಗೆರೆ ಶಂಕರ್‌ನಾಗ್, ಮಾವಿನಕೆರೆ ಎಂ.ಬಿ. ಗಂಗಾಧರ್, ಹೊಡಕೆ ಶೆಟ್ಟಿಹಳ್ಳಿ ಆನಂದ್, ಕಟ್ಟಹಳ್ಳಿ ಕೆ.ಎಸ್. ಗಂಗಾಧರ್, ಮರಟೀ ಕೊಪ್ಪಲು ಜಯಮ್ಮ ದೇವೇಗೌಡ ಗಂಜಿಗೆರೆ ನಂಜುಂಡಪ್ಪ ರಾಜ್ಯ ಯುವ ಪ್ರಶಸ್ತಿ ವಿಜೇತ ಚಿಕ್ಕಗಾಡಿಗನಹಳ್ಳಿ ಎನ್. ಪರಮೇಶ್, ಪೂವನಹಳ್ಳಿ ಜವರ ನಾಯಕ, ಮುದುಗೆರೆ ರಾಮೇಗೌಡ, ಜೆಡಿಎಸ್ ಮುಖಂಡರಾದ ವಿಜಯ ಕುಮಾರ್, ಕಬ್ಲುಗೆರೆಪುರ ರಮೇಶ್, ಯಗಚಗುಪ್ಪೆ ಎಲ್‌ಐಸಿ ಶಿವಪ್ಪ, ಚಿಕ್ಕಗಾಡಿ ಗನಹಳ್ಳಿ ಗ್ರಾಪಂ ಸದಸ್ಯ ರಾದ ಗಣೇಶ್, ಶಿವಕುಮಾರ್, ಶೆಟ್ಟಹಳ್ಳಿ ಲೋಕೇಶ್, ಶಿವಯ್ಯ ಇತರರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ