ಡಾ:ಬಾಬು ಜಗಜೀವನ್ ರಾಮ್ ಹೆಸರಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಆಗ್ರಹ

ವಿಜಯ ಸಂಘರ್ಷ 
ಭದ್ರಾವತಿ: ಬಹುಸಂಖ್ಯೆಯಲ್ಲಿರುವ ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಸಮುದಾಯ ಭವನ ನಿರ್ಮಾಣಕ್ಕೆ ನಗರದ ಬಿ ಹೆಚ್ ರಸ್ತೆ ಲೋಯರ್ ಹುತ್ತಾ ಡಾ.ಬಿ.ಆರ್. ಅಂಬೇಡ್ಕರ್ ಗ್ರಂಥಾಲಯ ಸಮುದಾಯ ಭವನ ಹಾಗೂ ಉಳಿದ ಜಾಗವನ್ನು ಡಾ: ಬಾಬು ಜಗಜೀವನ್ ರಾಮ್ ಹೆಸರಲ್ಲಿ ಮಾದಿಗ ಸಮಾಜಕ್ಕೆ ನೀಡಲು ಕರ್ನಾಟಕ ಮಾದಿಗ ಸಮಾಜ ಮುಖಂಡರು ನಗರಸಭೆ ಅಧ್ಯಕ್ಷರಲ್ಲಿ ಮನವಿ ಸಲ್ಲಿಸಿದರು. 

ಶಾಸಕರು ಹಾಗೂ ನಗರಸಭಾಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿಚಾರವನ್ನು ಪ್ರಸ್ತಾಪಿಸಿ ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗೆ ಜಾಗವನ್ನು ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದರು.

ಸಮುದಾಯದಿಂದ ಶರಣರ ಜಯಂತಿ ಗಳ ನ್ನಾಗಲೀ ಅಥವಾ ಧಾರ್ಮಿಕ ಕಾರ್ಯಕ್ರಮ ಗಳನ್ನು ಮಾಡಲು ಭವನ ಇರುವುದಿಲ್ಲ. ದೇಶದ ಹಸಿರು ಕ್ರಾಂತಿಯ ಹಾಗೂ ಕಾರ್ಮಿಕ ನಾಯಕರು ಹಾಗೂ ಮಾಜಿ ಉಪ ಪ್ರಧಾನಿ ಯಾದ ಡಾ:ಬಾಬು ಜಗಜೀವನ್ ರಾಮ್ ರವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ನೀಡಲು ಮುಖಂಡರು ಒತ್ತಾಯಿಸಿದರು.

ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್ ಅವರ ನೇತೃತ್ವದಲ್ಲಿ  ಉಪಾಧ್ಯಕ್ಷ ಮಣಿ, ನಗರಸಭಾ ಸದಸ್ಯರಾದ ವಿ.ಕದಿರೇಶ್, ಮಾದಿಗ ಸಮಾಜದ ಮುಖಂಡರಾದ ನರಸಿಂಹಮೂರ್ತಿ ಡಾ.ಎಸ್. ಕೃಷ್ಣ ಮತ್ತಿತರರು ಭಾಗವಹಿಸಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು