ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನ ಕೆರೆ ಹೋಬಳಿಯ ಬಲ್ಲೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನ ಬಯಸಿ ದೊಡ್ಡಗಾಡಿಗನಹಳ್ಳಿ ಕುಮಾರ್ ಉಪಾಧ್ಯಕ್ಷ ಸ್ಥಾನ ಬಯಸಿ ಅಟ್ಟುಪ್ಪೆ ಎಸ್. ಯೋಗ ಹೊರತು ಪಡಿಸಿ ಉಳಿದ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನಲೆ ಅಧ್ಯಕ್ಷ ಸ್ಥಾನಕ್ಕೆ ದೊಡ್ಡಗಾಡಿಗನಹಳ್ಳಿ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಅಟ್ಟುಪ್ಪೆ ಎಸ್.ಯೋಗ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಲ್ಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್ ಘೋಷಿಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷ ಘೋಷಣೆ ಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಬ್ಬಲ ಗೆರೆಪುರ ಪುಟ್ಟಸ್ವಾಮಿಗೌಡ ಅಭಿನಂದಿಸಿ ಬಳಿಕ ಮಾತನಾಡಿ, ಸೊಸೈಟಿ ವ್ಯಾಪ್ತಿಯ ಮತದಾರರು ನಮ್ಮ ಪಕ್ಷ ಹಾಗೂ ನಮ್ಮ ಮೇಲೆ ಹೆಚ್ಚಿನ ವಿಶ್ವಾಸವಿಟ್ಟು ಬಹುಮತ ವನ್ನು ಕೊಟ್ಟು ಈಗ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನ ಚುಕ್ಕಾಣಿ ಹಿಡಿಯಲು ಸಹಕಾರವನ್ನು ನೀಡಿದ್ದಾರೆ. ಅದಕ್ಕೆ ಸಂಘದ ಅಧ್ಯಕ್ಷ ಉಪಾಧ್ಯಕ್ಷ ರಾದವರಿಗೆ ಸಂಘದಲ್ಲಿ ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತದೆ. ಸಂಘದ ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವಂತೆ ಸಲಹೆ ನೀಡಿದ್ದಲ್ಲದೇ ನಮ್ಮ ಸಹಕಾರ ನಿಮಗೆ ಇದ್ದೆ ಇರುತ್ತದೆ.ಷೇರುದಾರರು, ರೈತರು ಬಗ್ಗೆ ಹಿತ ಕಾಯುವ ಕೆಲಸ ವನ್ನು ಮಾಡಬೇಕು.ಹೆಚ್ಚೆಚ್ಚು ಸಂಘ ದಲ್ಲಿ ಷೇರುದಾರರುರನ್ನು ಸದಸ್ಯರ ನ್ನಾಗಿ ಮಾಡಬೇಕು.ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗೆ, ಹಾಲು ಉತ್ಪಾದಕರಿಗೆ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಬೇಕು.ಸಾಲ ತೆಗೆದುಕೊಂಡವರು ಸಂಘದ ಭವಿಷ್ಯದ ದೃಷ್ಟಿಯಿಂದ ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸ ಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಕೆ.ಬಿ ಮಹೇಶ್, ಕಾಂಗ್ರೆಸ್ ಯುವ ಮುಖಂಡ ಕಾಶಿಮುರುಕನಹಳ್ಳಿ ಪ್ರೀತಮ್,ವಿದ್ಯುತ್ ಗುತ್ತಿಗೆದಾರ ಬಲ್ಲೇನಹಳ್ಳಿ ರಾಮು, ಸೊಸೈಟಿ ನೂತನ ಉಪಾಧ್ಯಕ್ಷ ಅಟ್ಟುಪ್ಪೆ ಎಸ್.ಯೋಗ, ನಿರ್ದೇಶಕರಾದ ಕಬ್ಬಲಗೆರೆಪುರ ಪುಟ್ಟಸ್ವಾಮಿ ಗೌಡ, ಬಲ್ಲೇನಹಳ್ಳಿ ರಮೇಶ್,ಪಟೇಲ್ ಸ್ವಾಮಿಗೌಡ,ಕಬ್ಲಗೆರೆಪುರ ನಾಗರಾಜು, ಪವಿತ್ರ, ಜಯರಾಮೇ ಗೌಡ, ಡೈರಿ ಅಧ್ಯಕ್ಷ ಸೋಮು, ಪಟೇಲ್ ಮಹದೇವ್, ಮೆಡಿಕಲ್ ಅಶೋಕ್, ಪುಟ್ಟರಾಜು, ಯೋಗೇಶ್, ರಾಮಕೃಷ್ಣ, ನವೀನ್, ಗೋಪಾಲ್ ಮೋಹನ್, ಹೇಮಂತ್ ಬಿ.ಎಸ್, ಆಡು ನಿಂಗಣ್ಣರ ಸ್ವಾಮಿಗೌಡ, ಕುಂಬಾರ್ ರಾಮಕೃಷ್ಣ, ಸೊಸೈಟಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.ಸಹ ಚುನಾವಣಾ ಅಧಿಕಾರಿ ಸೊಸೈಟಿ ಕಾರ್ಯದರ್ಶಿ ಅರುಣ್ ಕಾರ್ಯ ನಿರ್ವಹಿಸಿದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ