ಕಾಂಗ್ರೆಸ್ ಉಸ್ತುವಾರಿಯಾಗಿ ಶ್ಯಾಂಪ್ರಸಾದ್ ನೇಮಕ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ಪುರಸಭಾ ಸದಸ್ಯ ಕೆ.ಬಿ ಮಹೇಶ್ ಪುತ್ರ ಕಾಂಗ್ರೆಸ್ ಯುವ ಮುಖಂಡ ಶ್ಯಾಂಪ್ರಸಾದ್ ಅವರಿಗೆ ಭಾರತೀಯ ಯೂತ್ ಕಾಂಗ್ರೆಸ್ ಮೂರು ಜಿಲ್ಲೆಯ 18 ತಾಲ್ಲೂಕು 124 ವಾರ್ಡ್ ಗಳ ಚುನಾವಣಾ ಉಸ್ತುವಾರಿ ಯಾಗಿ ಭಾರತೀಯ ಯೂತ್ ಕಾಂಗ್ರೆಸ್ ನೇಮಕ ಮಾಡಿ‌ ಆದೇಶ ಹೊರಡಿಸಿದೆ.

ಮುಂಬಯಿ ನಗರದಲ್ಲಿ ಸಭೆಯಲ್ಲಿ ಭಾಗವಹಿಸಿ ನೂತನ ಜವಾಬ್ದಾರಿ ನೀಡುತ್ತಿದ್ದಂತೆ ಸಂತಸ ವ್ಯಕ್ತಪಡಿಸಿ ಮಾತನಾಡಿದ ಶ್ಯಾಂಪ್ರಸಾದ್ ಕಾಂಗ್ರೆಸ್ ಪಕ್ಷ ನನ್ನ ಗುರುತಿಸಿ ಒಂದು ಉನ್ನತ ಜವಾಬ್ದಾರಿ ಸ್ಥಾನ ವಾದ ಭಾರತೀಯ ಯೂತ್ ಕಾಂಗ್ರೆಸ್ ಮೂರು ಜಿಲ್ಲೆಯ‌ 18 ತಾಲ್ಲೂಕಿನ 124 ವಾರ್ಡ್ ನ ಚುನಾವಣಾ ಉಸ್ತುವಾರಿ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ,ಸೋನಿಯಾ ಗಾಂಧಿ,ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಗೌಡ ಹಾಗೂ ಜಿಲ್ಲಾ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನನಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಷ್ಠೆಯಿಂದ ಎಲ್ಲರನ್ನೂ ‌ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸವನ್ನು ನಿರ್ವಹಿಸುತ್ತೇನೆ.

ಬಳಿಕ ಕೆ ಆರ್ ಪೇಟೆ ಕಾರ್ಯಕರ್ತರು ಮಾತನಾಡಿ ನಮ್ಮ ತಾಲ್ಲೂಕಿಗೆ ಭಾರತೀಯ ಯೂತ್ ಕಾಂಗ್ರೆಸ್ ವತಿಯಿಂದ ‌ಉನ್ನತ‌ ಜವಾಬ್ದಾರಿ ನೀಡಿದ್ದು ನಮ್ಮ ತಾಲ್ಲೂಕಿನ ಕಾಂಗ್ರೆಸ್ ಯುವ ಕಾರ್ಯಕರ್ತರಿಗೆ ಹೆಮ್ಮೆಯ ವಿಷಯ ಎಂದು‌ ಯುವ ಘಟಕ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.

*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು