ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಮುಖ್ಯಮಂತ್ರಿಗಳ ಚಿನ್ನದ ಪದಕದ ಗೌರವಕ್ಕೆ ಭಾಜನರಾಗಿರುವ ಕೆ.ಆರ್. ಪೇಟೆ ಪಟ್ಟಣ ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ ಅವರನ್ನು ತಾಲ್ಲೂಕು ಎಸ್.ಸಿ.ಎಸ್.ಟಿ ಸರ್ಕಾರಿ ನೌಕರರ ವತಿಯಿಂದ ಸನ್ಮಾನಿಸಿ ಸಿಹಿ ತಿನಿಸುವ ಮೂಲಕ ಗೌರವಿಸಿಸಲಾಯಿತು.
ಬಳಿಕ ಮಾತನಾಡಿದ ತಾಲೂಕು ಎಸ್ಸಿ ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಳಿಯೂರು ಯೋಗೇಶ್ ತಾಲ್ಲೂಕಿನ ಕ್ರಿಯಾ ಶೀಲ ಮಹಿಳಾ ಸರ್ಕಾರಿ ಅಧಿಕಾರಿ ಗಳಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜೊತೆಗೆ ಜನಸ್ನೇಹಿ ಪೊಲೀಸ್ ಕರ್ತವ್ಯವನ್ನು ಕೆಲಸ ಮಾಡುತ್ತಿ ರುವ ಪಟ್ಟಣ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಸುಮಾರಾಣಿ ಶಿಸ್ತು ಮತ್ತು ಬದ್ಧತೆಯಿಂದ ಕಾಯಕವನ್ನು ಪರಿಗಣಿಸಿ ರಾಜ್ಯ ಸರ್ಕಾರದಿಂದ ಚಿನ್ನದ ಪದಕ ಪಡೆದು ತಾಲೂಕಿಗೆ ಕೀರ್ತಿ ಹೆಚ್ಚಿಸಿರು ವುದು ಸಂತಸದ ವಿಚಾರ. ಪ್ರತಿಷ್ಠಿತ ಪದಕಕ್ಕೆ ಗೌರವ ತರುವ ನಿಟ್ಟಿನಲ್ಲಿ ಠಾಣೆಗೆ ಬರುವ ಬಡಜನರ ಸಮಸ್ಯೆಗಳನ್ನು ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸುವ ಮೂಲಕ ನೊಂದವರ ನೋವಿಗೆ ಧ್ವನಿ ಯಾಗಿ ಮತ್ತಷ್ಟು ಗೌರವಾನ್ವಿತ ಗೌರವ ದೊರೆಕಲಿ ಎಂದರು.
ಈ ಸಂದರ್ಭದಲ್ಲಿ ಮುಖಂಡ ದೊಡ್ಡ ಸೋಮನಹಳ್ಳಿ ಮಂಜುನಾಥ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್,ಖಜಾಂಚಿ ಕುಮಾರ್,ಸಹ ಕಾರ್ಯದರ್ಶಿ ಗೋಪಾಲ ಕೃಷ್ಣ,ಸಹ ಕಾರ್ಯದರ್ಶಿ ನಂಜುಂಡ, ಶಿಕ್ಷಕಿ ಹೇಮಾವತಿ,ಗಂಗಾಧರ್, ಗೋಪಾಲ್, ಅಣ್ಣಯ್ಯ ಭಾರತಿ,ಬೆಟ್ಟಮ್ಮ, ಜಯಶೀಲ, ಮಂಡ್ಯ ಚಂದ್ರು ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ