ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ನಮ್ಮ ನಾಡಿನ ಚಾರಿತ್ರಿಕ ಸಂಸ್ಕೃತಿಯ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ ಪೌರಾಣಿಕ ನಾಟಕಗಳ ಪಾತ್ರ ಮಹತ್ತರವಾದು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.*
ತಾಲ್ಲೂಕಿನ ಕಿಕ್ಕೇರಿ ಗ್ರಾಮದಲ್ಲಿ ಕಿಕ್ಕೇರಮ್ಮನ ಜಾತ್ರಾ ಮಹೋತ್ಸವ ಹಾಗೂ ಹೊಕಳಿ ಹಬ್ಬದ ಪ್ರಯುಕ್ತ ಶ್ರೀ ದೊಡ್ಡಮ್ಮ ಮತ್ತು ಚಿಕ್ಕಮ್ಮ ಕೃಪಾ ಪೋಷಿತ ನಾಟಕ ಮಂಡಳಿಯ ಆಯೋಜಿಸಿದ್ದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಕಲೆ, ಸಂಸ್ಕೃತಿಗಳನ್ನು ಗೌರವಿಸುವುದು ಈ ನಾಡಿನ ಪ್ರತಿಯೊಬ್ಬರ ಕರ್ತವ್ಯ. ನಮ್ಮ ಕಲೆ, ಸಂಸ್ಕೃತಿಗಳ ಮಹತ್ವವನ್ನು ಜನರಿಗೆ ತಿಳಿಸಿ ಜಾಗೃತಿ ಗೊಳಿಸುವ ಕೆಲಸವನ್ನು ಮಾಡಬೇಕಾಗಿದೇ.ಅಸಂಘಟಿತ ಕಲಾವಿದರನ್ನು ಗುರುತಿಸಿ ಅವರ ಕಲೆಯನ್ನು ಸಾಬೀತು ಪಡಿಸಲು ನಾಟಕಗಳು ಮುಖ್ಯ ಪಾತ್ರ ವಹಿಸುತ್ತವೆ. ಗ್ರಾಮೀಣ ಭಾಗದಲ್ಲಿ ಪ್ರೋತ್ಸಾಹವಿದೆ ಆದರೆ ನಗರ ಪ್ರದೇಶ ಗಳಲ್ಲಿ ಹೆಚ್ಚೆಚ್ಚು ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ನಮ್ಮ ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡ ಬೇಕಾಗಿದೆ.ಇತ್ತಿಚೆಗೆ ಮಹತ್ವ ಕಳೆದು ಕೊಳ್ಳುತ್ತಿರುವ ನಾಟಕಗಳನ್ನು ಉಳಿಸಲು ಸಂಘ ಸಂಸ್ಥೆಗಳ ಪಾತ್ರ ಮುಖ್ಯ.
ನಾಟಕಗಳು ಮನಸ್ಸನ್ನು ಮುದಗೊಳಿಸಿ ಮನೋರಂಜನೆ ನೀಡುವುದಲ್ಲದೆ, ನಮ್ಮ ನಾಡಿನ ಐತಿಹಾಸಿಕ, ಪಾರಂಪರಿಕ ಘಟನಾ ವಳಿಗಳನ್ನು ಜನರಿಗೆ ಮನಮುಟ್ಟುವಂತೆ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿಕ್ಷಕ ಆನಂದ್, ಡ್ರಾಮಾ ಮಾಸ್ಟರ್ ರಾಮಚಂದ್ರ, ಕಲಾವಿದರಾದ ಶಿಕ್ಷಕ ಧರ್ಮಪ್ಪ, ಕೃಷ್ಣಪುರ ಗಿರೀಶ್, ರುದ್ರೇಶ್,ಕರಿಗನಹಳ್ಳಿ ಮಂಜುನಾಥ್, ಶಿಕ್ಷಕ ಮಂಜುನಾಥ್, ಲಕ್ಷ್ಮಿಪುರ ಚಂದ್ರು,ಲಕ್ಷ್ಮಿಪುರ, ಕಿಕ್ಕೇರಿ ಗ್ರಾಮದ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ