ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ತಾಲ್ಲೂಕು ಬಂಡಿ ಹೊಳೆ ಹೇಮಗಿರಿ ಹೆಡ್ ಕ್ವಾರ್ಟರ್ಸ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಯ ನಿರ್ದೇಶಕ ಸ್ಥಾನಕ್ಕೆ ಏ :20 ರಂದು ನಡೆಯಲಿರುವ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಬಂಡಿಹೊಳೆ ಬಿ.ಆರ್ ಜಗದೀಶ್ ಅವರು ಚುನಾವಣಾ ಅಧಿಕಾರಿ ಭರತ್ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು ಈ ಹಿಂದೆ ಹೇಮಗಿರಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಒಂದು ಬಾರಿ ನಿರ್ದೇಶಕ ರಾಗಿ, ಅಧ್ಯಕ್ಷರಾಗಿ ಪಕ್ಷ ಭೇದ ಮರೆತು ಸಹಕಾರ ತತ್ವಗಳನ್ನು ಮೈಗೂಡಿಸಿ ಕೊಂಡು ಸಂಘದ ಮತ್ತು ರೈತರ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಶ್ರಮವಹಿಸಿರುವ ತೃಪ್ತಿ ನನಗಿದೆ ಹಾಗಾಗಿ ಇದೇ ತಿಂಗಳು 20ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಿದ್ದು ಮತ್ತೊಮ್ಮೆ ಸಂಘದ ಹಾಗೂ ರೈತರ ಅಭಿವೃದ್ಧಿಗೆ ದುಡಿಯಲು ಸೊಸೈಟಿ ವ್ಯಾಪ್ತಿಗೆ ಬರುವ ಸಂಘದ ಮತದಾರರು ಅತಿ ಹೆಚ್ಚು ಮತ ನೀಡುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಅಭ್ಯರ್ಥಿಗಳಾದ ಬಂಡಿಹೊಳೆ ಹರೀಶ್, ಗಣೇಶ್, ಸಂತೋಷ್, ಪುಟ್ಟಯ್ಯ, ಸುಕನ್ಯ ಭಾಗ್ಯಮ್ಮ ಇಂದು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ರಾಮೇಗೌಡ,ಹಾಲು ಉತ್ಪಾದಕರ ನೌಕರರ ಸಂಘದ ತಾಲೂಕು ಅಧ್ಯಕ್ಷ ಕುಪ್ಪಹಳ್ಳಿ ಲವಕುಮಾರ್, ಮುಖಂಡ ರಾದ ಕುಪ್ಪಹಳ್ಳಿ ಡೈರಿ ನಿರ್ದೇಶಕ ಪ್ರಭಾಕರ್, ಮಂಜುನಾಥ್, ಪ್ರಕಾಶ್, ಯುವ ಮುಖಂಡ ರಾಘು, ಹರೀಶ್, ಮತ್ತಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ