ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ರಾಜ್ಯ ಸರ್ಕಾರ ಬೆಲೆ ಏರಿಕೆ ಮೂಲಕ ಜನರ ಜೋಬಿಗೆ ಕನ್ನ ಹಾಕುತ್ತಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಅಂಕನಹಳ್ಳಿ ಗ್ರಾಮದ ನೂತನ ರಂಗ ಮಂಟಪ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಂಕನಹಳ್ಳಿ ಇತಿಹಾಸದಿಂದಲೂ ಜೆಡಿಎಸ್ ಪಕ್ಷವನ್ನ ಕಟ್ಟಿ ಬೆಳೆಸಿ ಕಾಪಾಡುತ್ತಾ ಬಂದಿದೆ ಎಂಬುದಕ್ಕೆ ಉದಾಹರಣೆ ಪ್ರತಿಯೊಂದು ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅಭೂತಪೂರ್ವ ಮತ ನೀಡಿ ಗ್ರಾಮಕ್ಕೆ ಸ್ವಾಗತಿಸಿರುವ ಪರಿಯೇ ಸಾಕ್ಷಿಯಾಗಿದೆ. ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರಗ್ಯಾರಂಟಿ ಯೊಜನೆಯಲ್ಲಿ ರೂ.2000 ಗೃಹ ಲಕ್ಷ್ಮಿ ಯೋಜನೆಯ ಹಣ ಉಪ ಚುನಾವಣೆ ಗಿಮಿಕ್ ಆಗಿದೆ. ಚನ್ಮಪಟ್ಟಣ, ಸಂಡೂರು ನಲ್ಲಿ ವಿತರಣೆ ಆಗಿದೆ ನಮ್ಮ ಸಂಪತ್ತು ಸ್ವೇಚಾಚಾರವಾಗಿ ಖರ್ಚಾ ಗುತ್ತಿದೆ ರೈತರು ಬೆವರು ಸುರಿಸಿ ದುಡಿದ ಹಣವನ್ನು ಹೊರರಾಜ್ಯ ಚುನಾವಣೆಗೆ ಖರ್ಚು ಮಾಡುತ್ತಿದ್ದಾರೆ.
ಚುನಾವಣೆಗೋಸ್ಕರ ಮಾತ್ರ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ದುರಾಡಳಿತವನ್ನು ಈಗ ಈ ರಾಜ್ಯದ ಜನರು ನೋಡ್ತಾ ಇದ್ದಾರೆ. ಈ ಘನ ಸರ್ಕಾರದ ಸಚಿವರೊಬ್ಬ ಎಸ್. ಸಿ.ಎಸ್.ಟಿ ಹಣ ದುರುಪಯೋಗದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ ಇದು ಕಾಂಗ್ರೆಸ್ ಆಗಿದೆ.
ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಪಾಠವನ್ನು ಜನ ಕಲಿಸಲಿದ್ದಾರೆ.ಬೆಲೆ ಏರಿಕೆ ವಿಚಾರಕ್ಕೆ ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಪತ್ರಿಕಾ ಗೋಷ್ಠಿ ಅತಿ ಶೀಘ್ರ ದಲ್ಲೇ ತಿಳಿಸುತ್ತೇವೆ. ದೇವೇಗೌಡ್ರು ಕಟ್ಟಿರುವ ಈ ಪ್ರಾದೇಶಿಕ ಪಕ್ಷವನ್ನು ನಾವೆಲ್ಲ ಉಳಿಸಬೇಕಾಗಿರುತ್ತದೆ ಈ ಪಕ್ಷವನ್ನು ಎಲ್ಲಾ ಸಮುದಾಯದವರು ಬೆಳೆಸಿದ್ದಾತೆ ನಿಮ್ಮ ಜೊತೆ ನಾವಿದ್ದೇವೆ ಮುಂದೆ ಪಕ್ಷವನ್ನು ಬಲಪಡಿಸೋಣ.
*ಅನುದಾನಕ್ಕಾಗಿ ಪಾದಯಾತ್ರೆ ಚಾಲನೆ*
ಕೆ ಆರ್ ಪೇಟೆ ಕ್ಷೇತ್ರದ ಶಾಸಕ ಎಚ್. ಟಿ ಮಂಜು ಹಲವು ಬಾರಿ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಸಂಬಂಧಪಟ್ಟ ಸಚಿವರಿಗೂ ಮನವಿ ಮಾಡಿದರು. ಸ್ಪಂದಿಸಿ ಅನುದಾನ ನೀಡುತ್ತಿಲ್ಲದಿರುವ ವಿಚಾರವಾಗಿ ನಾನೇ ಖುದ್ದು ಉದ್ಘಾಟನೆ ಮಾಡಿ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಶಾಸಕ ಹೆಚ್.ಟಿ ಮಂಜು ಮಾತನಾಡಿ ಅಂಕನಹಳ್ಳಿ ಜೆಡಿಎಸ್ ಪಕ್ಷದ ಶಕ್ತಿಯ ಗ್ರಾಮದಲ್ಲಿ ಊರಿನ ಗ್ರಾಮಸ್ಥರು ಒಗ್ಗಟ್ಟಿ ನಿಂದ ಸುಂದರ ರಂಗಮಂಟಪ ಉದ್ಘಾಟನೆಗೆ ನಮ್ಮ ನಾಯಕರಾದ ನಿಖಿಲ್ ಕುಮಾರ ಸ್ವಾಮಿ ಮತ್ತು ನಮ್ಮ ಪಕ್ಷದ ಶಾಸಕರನ್ನ ಅದ್ದೂರಿಯಾಗಿ ಸ್ವಾಗತಿಸಿರುವುದು ನಿಜಕ್ಕೂ ಸಂತಸ ತಂದಿದೆ. ಅದೇ ರೀತಿ ಗ್ರಾಮ ಅಭಿವೃದ್ಧಿಗೂ ಕೂಡ ಸರ್ಕಾರದ ಯೋಜನೆ ಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಗೆ ಸಾಕ್ಷಿಯಾಗಿರು ವುದು ನಿಜಕ್ಕೂ ಶ್ಲಾಘನೀಯ ಎಂದರು.
ಬಳಿಕ ಮಾತನಾಡಿದ ಹುಣಸೂರು ಶಾಸಕ ಜಿ.ಡಿ ಹರೀಶ್ ಈ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ಬಾರಿಗೆ ನಾನು ಹೆಚ್.ಟಿ ಮಂಜು, ಹಾಸನದ ಶಾಸಕ ಸ್ವರೂಪ ಕೂಡ ಶಾಸಕರಾಗಿದ್ದೇವೆ.ನಮ್ಮ ಕಷ್ಟ ಯಾರಿಗೆ ಹೇಳಬೇಕು ಎಂದು ತಿಳಿಯದೆ ನಮ್ಮ ನಾಯಕರಾದ ಹೆಚ್.ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ರವರಿಗೆ ನಮ್ಮ ಕಷ್ಟಗಳನ್ನ ಹೇಳಿಕೊಳ್ಳುತ್ತಿದ್ದೇವೆ ಏಕೆಂದರೆ ಈ ರಾಜ್ಯ ಸರ್ಕಾರ ವರ್ಷಕ್ಕೆ ಎರಡು ಕೋಟಿ ಅನುದಾನ ನೀಡಿದೆ.ಆ ಎರಡು ಕೋಟಿ ತೆಗೆದುಕೊಂಡು ನನ್ನ ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ಗ್ರಾಮಗಳಿವೆ ಯಾವ ಅಭಿವೃದ್ಧಿ ಮಾಡಲಿ ಒಂದು ಗ್ರಾಮಕ್ಕೆ 15,000 ಬರುವುದಿಲ್ಲ ನಾನು ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿ ಎಂಎಲ್ಎ ಆಗಿದ್ದೇನೆ ಎಂದು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಅಂಕನಹಳ್ಳಿ ಗ್ರಾಮಕ್ಕೆ ಆಗಮಿಸುವ ಮುಂಚೆ ಗ್ರಾಮದ ಯುವಕರು ಐಕನಹಳ್ಳಿ ಗೇಟ್ ನಿಂದ ಜೆಡಿಎಸ್ ಪಕ್ಷದ ನೂರಾರು ಯುವ ಕಾರ್ಯಕರ್ತರು ಬೈಕ್ ರ್ಯಾಲಿ ಮುಖಾಂತರ ಅದ್ದೂರಿಯಾಗಿ ಸ್ವಾಗತಿಸಿ ಗ್ರಾಮಕ್ಕೆ ಕರೆತರಲಾಯಿತು.
ಈ ಸಂದರ್ಭದಲ್ಲಿ ಚನ್ನರಾಯಪಟ್ಟಣ ಶಾಸಕ ಸಿ.ಎನ್ ಬಾಲಕೃಷ್ಣ, ಹಾಸನ ಶಾಸಕ ಸ್ವರೂಪ್ ಪ್ರಕಾಶ್,ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕಿ ರಾಮ್, ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮಿ ಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ ಕಿರಣ್,ಟಿ.ಎ.ಪಿ.ಸಿ. ಎಂ.ಎಸ್ ನಿರ್ದೇಶಕ ಬಲದೇವ್, ಮಾಜಿ ನಿರ್ದೇಶಕ ಹೆಚ್.ಟಿ ಲೋಕೇಶ್ ರಾಜ್ಯ ಜೆಡಿಎಸ್ ಒಕ್ತಾರ ಗದ್ದೆಹೊಸೂರು ಅಶ್ವಿನ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಮುಖಂಡ ಕೃಷ್ಣೆಗೌಡ, ಶೇಖರ್,ಐಕನಹಳ್ಳಿ ದೇವೇಗೌಡ, ಶೆಟ್ಟನಾಯ್ಕನ ಕೊಪ್ಪಲು ಶೇಖರ್,ಪುರಸಭಾ ಸದಸ್ಯ ಗಿರೀಶ್, ಮಾಜಿ ಸದಸ್ಯ ಹೇಮಂತ್, ಯುವಕ ಮುಖಂಡ ಪ್ರವೀಣ್,ಅಂಕನಹಳ್ಳಿ ಗ್ರಾಮಸ್ಥರು ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ