ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: "ಚುನಾಯಿತ ಜನಪ್ರತಿನಿಧಿ ಗಳು ಜನರ ಸೇವಕರೇ ಹೊರತು ಸರ್ವಾಧಿಕಾರಿಗಳಲ್ಲ" ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಹಕ್ಕುಗಳ ಮತ್ತು ಸಂವಿಧಾನ ಹಕ್ಕುಗಳ ಬಗ್ಗೆ ಹಾಗೂ ಇಲಾಖಾವಾರು ದೊರೆಯುವ ಸೌಲಭ್ಯಗಳ ಮತ್ತು ಕರ್ತವ್ಯಗಳ ಬಗ್ಗೆ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಯ ಎಲ್ಲಾ ಇಲಾಖೆಗಳಲ್ಲಿ ಜಾಗೃತಿ ಮೂಡಿಸಲು ಏ:14 ರಿಂದ 30 ರ ವರೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿ ಕೊಂಡಿದ್ದೇವೆ ಎಂದರು.
ಏ: 14 ರಂದು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಯ ಪ್ರಯುಕ್ತ ಬಿ.ಹೆಚ್.ರಸ್ತೆ ಯಲ್ಲಿ ರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಶಾಸಕರು ಹಾಗೂ ಕೆ ಆರ್ ಐ ಡಿ ಎಲ್ ಅಧ್ಯಕ್ಷರಾದ ಬಿ.ಕೆ. ಸಂಗಮೇಶ್ವರ್ ರವರು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಹಿರಿಯ ಪ್ರಗತಿಪರ ಚಿಂತಕರಾದ ಡಿ.ಸಿ. ಮಾಯಣ್ಣ ನವರು ಜಾಗೃತಿ ಕಾರ್ಯ ಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನರೇಗಾ,ಉದ್ಯೋಗ ಖಾತ್ರಿ ಯೋಜನೆ ಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ದಿನಕ್ಕೆ ರೂ.500/- ಸಂಬಳ, ಪ್ರತಿ ವ್ಯಕ್ತಿಗೆ ವರ್ಷಕ್ಕೆ 200 ಕೆಲಸ, ಕುಟುಂಬದಲ್ಲಿ ಇಬ್ಬರಿಗೆ ಪ್ರತಿದಿನ ಕೆಲಸ ನೀಡುವಂತೆ, ಕಟ್ಟಡ ಕಾರ್ಮಿಕರಿಗೆ ನೀಡುವಂತಹ ಹಲವು ಸೌಲಭ್ಯಗಳನ್ನು ಉದ್ಯೋಗ ಖಾತ್ರಿ ಕಾರ್ಮಿಕರಿಗೂ ವಿಸ್ತರಿಸ ಬೇಕೆಂದು, 60 ವರ್ಷದ ನಿವೃತ್ತಿ ನಂತರ ಪ್ರತಿ ತಿಂಗಳು ಪಿಂಚಣಿ ನೀಡಬೇಕೆಂದು ಉದ್ಯೋಗ ಖಾತ್ರಿ ಕಾರ್ಮಿಕರ ಮಕ್ಕಳಿಗೆ ಉನ್ನತಮಟ್ಟದ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ ನೀಡಿ, ಭದ್ರತೆ ನೀಡಬೇಕು ಹಾಗೂ ಪ್ರತಿ ಗ್ರಾಮಗಳಲ್ಲಿ ಗುಡಿ ಕೈಗಾರಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾರಂಭಿಸ ಬೇಕೆಂದು ಒತ್ತಾಯಿಸುವ ಮನವಿ ಪತ್ರಗಳನ್ನು ಪ್ರತಿ ಗ್ರಾಮಪಂಚಾಯಿತಿ ಯ ಪಿಡಿಓ ರವರ ಮೂಲಕ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳಿಗೂ ಮನವಿ ಅರ್ಪಿಸಲಾಗುವುದು.
ಅಲ್ಲದೆ ಗ್ರಾಮಪಂಚಾಯಿತಿಯಲ್ಲಿನ ಇ-ಸ್ವತ್ತು, ಖಾತೆ, ಬಗರ್ ಹುಕುಂ ಜಮೀನು, ಹಲವು ನಿಗಮಗಳ ಸಾಲ-ಸಬ್ಸಿಡಿ ಯೋಜನೆಗಳ ಬಗ್ಗೆ ಕಾನೂನಿನ ಅರಿವಿನ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ. ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಕಛೇರಿ, ತಾಲ್ಲೂಕು ಪಂಚಾಯಿತಿ, ನಗರಸಭೆ, ಪೊಲೀಸ್ ಇಲಾಖೆ. ಕೃಷಿ ಇಲಾಖೆ, ಪಿ.ಡಬ್ಲ್ಯು.ಡಿ. ಇಲಾಖೆ, ಪಶು ಇಲಾಖೆ, ಅನೇಕ ಇಲಾಖೆಗಳಲ್ಲಿ ಇರುವ ಮಾಹಿತಿಗಳ ಬಗ್ಗೆ ಜಾಗೃತಿ ಮೂಡಿಸಲು ಏ: 14 ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಯಿಂದ ಏ :30 ರ ವಿಶ್ವಮಾನವ ಬಸವಣ್ಣ ನವರ ಜಯಂತಿಯವರೆಗೂ ಜಾಗೃತಿ ಮೂಡಿಸಿ, ಮೇ ತಿಂಗಳಲ್ಲಿ ವಿಶ್ವ ಮಾನವ ಸಮಾವೇಶವನ್ನು ನಡೆಸಲು ತೀರ್ಮಾನಿಸ ಲಾಗಿದೆ. ವಿಶ್ವ ಮಾನವ ಸಮಾವೇಶವನ್ನು ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಶಾಸಕರು ಹಾಗೂ ಕೆ ಆರ್ ಐ ಡಿ ಎಲ್ ಅಧ್ಯಕ್ಷರಾದ ಬಿ.ಕೆ. ಸಂಗಮೇಶ್ವರ್, ವಿಧಾನಪರಿಷತ್ ಶಾಸಕಿ ಬಲ್ಕಿಷ್ ಬಾನು ರವರು ಸೇರಿದಂತೆ ಅನೇಕ ಗಣ್ಯರು ಭಾಗಹಿಸಲಿದ್ದಾರೆ.
ಮಾನವ ಹಕ್ಕುಗಳ ಹಾಗೂ ಸಂವಿಧಾನ ಹಕ್ಕುಗಳ ಜಾಗೃತಿ ಕಾರ್ಯಕ್ರಮಕ್ಕೆ ಚುನಾಯಿತ ಪ್ರತಿನಿಧಿಗಳು, ಮಾಜಿ ಚುನಾಯಿತ ಪ್ರತಿನಿಧಿಗಳು, ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು, ಸ್ವಸಹಾಯ ಸಂಘಗಳ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸ ಬೇಕೆಂದು ಬಿ ಎನ್ ರಾಜು ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಐ.ಎಲ್.ಅರುಣ್ ಕುಮಾರ್, ಉಪಾಧ್ಯಕ್ಷ ಬ್ರಹ್ಮ ಲಿಂಗಯ್ಯ, ಈರೇಶ್, ಶ್ರೀನಿವಾಸ್, ಅಭಿಷೇಕ್ ಮತ್ತು ಮನೋಜ್ ಉಪಸ್ಥಿತರಿದ್ದರು.