ಸಾಹಿತ್ಯ ಭವನ ನಿರ್ಮಾಣ ಕನ್ನಡದ ಮನಸ್ಸುಗಳು ಸಹಕರಿಸಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಶುಭ ಶ್ರೀರಾಮ ನವಮಿ
ದಿನದಂದು ಬಹು ನಿರೀಕ್ಷಿತ ಕನ್ನಡ ಸಾಹಿತ್ಯ ಭವನ ನಿರ್ಮಾಣ ಕಾಮಗಾರಿ ಆರಂಭಿಸಿ ರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ಸಮಿತಿಯ ಶ್ರಮಕ್ಕೆ ಕನ್ನಡದ ಮನಸ್ಸುಗಳು ಸಹಕರಿಸಿ, ಯಶಸ್ವಿಗೊಳಿಸಲು ನಾವೂ ಕೂಡಾ ಕಟ್ಟಡದ ಅಂತಿಮದವರೆಗೆ ಕೈಜೋಡಿಸುವುದಾಗಿ ಶಾಸಕ ಹಾಗೂ ಕೆಆರ್‌ಐಡಿಎಲ್ ನಿಗಮದ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ್ ಹೇಳಿದರು.

ಅವರು ನಗರದ ಸಿದ್ದಾಪುರ ಬಡಾವಣೆ ಯಲ್ಲಿ 79,100 ಅಡಿ ನಿವೇಶನದಲ್ಲಿ ನಿರ್ಮಿಸಲು ಉದ್ದೇಶಿಸಿರುವ 3.80 ಕೋಟಿರೂ. ವೆಚ್ಚದ ಸುಂದರ ಸುಸಜ್ಜಿತ ಕನ್ನಡ ಸಾಹಿತ್ಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕಾಂಗ್ರೇಸ್ ಪಕ್ಷ ಹಾಗೂ ಕನ್ನಡದ ಕಟ್ಟಾಳು ಎನ್‌ಟಿಬಿ ಸದಸ್ಯರು ಹಾಗೂ ಪುರಸಭೆಯ ಮಾಜಿ ಉಪಾಧ್ಯಕ್ಷರಾಗಿದ್ದ ದಿ: ಷಾ ಚಂಪಾ ಲಾಲ್ ಜೈನ್ ರವರು 30 ವರ್ಷಗಳ ಹಿಂದೆ ಕನ್ನಡ ಭವನಕ್ಕೆಂದು ಕೊಡಿಸಿದ್ದ ನಿವೇಶನ ದಲ್ಲಿ ಇಂದು ಭೂಮಿ ಪೂಜೆ ನಡೆದಿದೆ. ಈ ಭವನವು ಶೀಘ್ರ ಪೂರ್ಣಗೊಂಡು ಚಂಪಾಲಾಲರ ಕನಸು ನನಸಾಗಿಸಲು ಎಲ್ಲರ ಸಹಕಾರ ಬೇಕಾಗಿದೆ. ಭವನ ಕಾಮಗಾರಿ ಪೂರ್ಣಗೊಳ್ಳುವವರೆಗೆ ನಮ್ಮ ಸಹಕಾರವಿರುತ್ತದೆ ಎಂದರು.

ನಗರಸಭೆ ಅಧ್ಯಕ್ಷೆ ಕೆ.ಸಿ.ಗೀತಾ ರಾಜಕುಮಾರ್ ಈ ಕಾರ್ಯಕ್ಕೆ ನಗರಸಭೆ ಮತ್ತು ನಾವು ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

ಕಸಾಪ ಅಧ್ಯಕ್ಷ ಕೋಡ್ಲುಯಜ್ಞಯ್ಯ 55 ಸಾವಿರ ವೈಯಕ್ತಿಕ ದೇಣಿಗೆಯ ಚೆಕ್‌ನ್ನು ಶಾಸಕರಿಗೆ ನೀಡಿ ಮಾತನಾಡಿ, ಇನ್ನು 45 ಸಾವಿರ ರೂ. ನೀಡುವುದಾಗಿ ಹೇಳಿದರು.

ವೇದಿಕೆಯಲ್ಲಿ ಸಮಿತಿಯ ಉಪಾಧ್ಯಕ್ಷ ಹಾಗೂ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ನೇತಾರ ಡಿ.ಪ್ರಭಾಕರ ಬೀರಯ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಸುಧಾಮಣಿ, ಇಂಜಿನಿಯರ್ ಲಕ್ಷಣ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಉಪಸ್ಥಿತರಿದ್ದರು. 

ಕಸಾಪ ಪದಾಧಿಕಾರಿಗಳಾದ ಎಂ.ಇ.ಜಗದೀಶ್, ಹೆಚ್.ತಿಮ್ಮಪ್ಪ, ನಾಗೋಜಿರಾವ್, ಪ್ರಕಾಶ್, ಕೋಗಲೂರು ತಿಪ್ಪೇಸ್ವಾಮಿ, ಕೆ.ಹೆಚ್.ತೀರ್ಥಯ್ಯ, ಕುಸುಮಾ, ಆರ್.ಎಸ್.ಶೋಭಾ, ಮಲ್ಲಿಕಾಂಬೆ, ಉಷಾ, ಉಮಾ, ರವಿಕುಮಾರ್, ಮೋಹನ್, ಸತ್ಯಮೂರ್ತಿ ಮುಂತಾದವರಿದ್ದರು.

ರೇವಣ್ಣ ಮತ್ತು ತಂಡದವರು 'ಕಟ್ಟ ಬೇಕಾ ಕನ್ನಡಮ್ಮನ ಗುಡಿ' ಎಂಬ ಸ್ವರಚಿತ ಗೀತೆಯನ್ನು ಹಾಡಿ ಮೆಚ್ಚುಗೆಗೆ ಪಾತ್ರರಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು