ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕಾಲುವೆಯಲ್ಲಿ ಮೀನು ಹಿಡಿಯಲು ಹೋದ ಐವರು ಮಕ್ಕಳು ಭಾನುವಾರ ಸಂಜೆ ನಾಪತ್ತೆಯಾಗಿ ದ್ದಾರೆ. ತಾಲೂಕಿನ ಕುಮಾರಿ ನಾರಾಯಣಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಧನುಷ್ (14), ಕಿರಣ್ (10), ಲೋಹಿತ್ (12), ಭುವನ್ (8) ಮತ್ತು ಲಕ್ಷ್ಮೀಶ (12) ನಾಪತ್ತೆಯಾದ ಮಕ್ಕಳು ಎಂದು ತಿಳಿದು ಬಂದಿದೆ.
ಎಂಟರಿಂದ 14 ವರುಷದ ಮಕ್ಕಳು ನಾಪತ್ತೆ ಯಾಗಿರುವ ಸುದ್ದಿ ಊರಿಗೆಲ್ಲಾ ಹರಡಿತ್ತು.ಮಕ್ಕಳು ಮನೆಯಲ್ಲಿ ಹೇಳದೆ ಮೀನು ಹಿಡಿಯಲು ಹೋಗಿದ್ದರು. ಈ ವಿಚಾರಕ್ಕೆ ಮನೆಯಲ್ಲಿ ಬೈಯ್ಯುವ ಕಾರಣಕ್ಕೆ ತೋಟ ವೊಂದರಲ್ಲಿ ಅಡಗಿ ಕುಳಿತಿದ್ದರು. ಆದರೆ ಮಕ್ಕಳ ಸುಳಿವು ಸಿಗದೇ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು. ಬಾಲಕರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿ ಪೊಲೀಸರು ಹುಡುಕಾಟ ಆರoಭಿಸಿದ್ದರು.
ಸೋಮವಾರ ಬೆಳಗಿನ ಜಾವ ಊರಿನಿಂದ ಒಂದು ಕಿಮಿ ದೂರದಲ್ಲಿ ರುವ ತೋಟದಲ್ಲಿ ಬಾಲಕರು ದೊರೆತ್ತಿದ್ದಾರೆ.