ಭದ್ರಾವತಿ-ಇಂದು ಈ ಭಾಗ ಗಳಲ್ಲಿ ಪವರ್ ಕಟ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮೆಸ್ಕಾಂ ಘಟಕ-1, 2, 3 ಮತ್ತು 4ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು ಬೆಳಿಗ್ಗೆ 9.30 ರಿಂದ ಸಂಜೆ 5.30ರವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ರಬ್ಬರ್‌ಕಾಡು, ಬಾಳೇಮಾರನಹಳ್ಳಿ, ಸುಲ್ತಾನ್‌ಮಟ್ಟಿ, ತಾರೀಕಟ್ಟೆ, ಹೊಳೆಗಂಗೂರು, ಚಿಕ್ಕಗೊಪ್ಪೇನ ಹಳ್ಳಿ, ಗೊಂದಿ, ಕಾಳನಕಟ್ಟೆ, ಕಂಬದಾಳ್‌ ಹೊಸೂರು, ಹೊನ್ನಟ್ಟಿಹೊಸೂರು, ಹೊನ್ನಟ್ಟಿಹೊಸೂರು ಕ್ಯಾಂಪ್, ಸಿದ್ದರಹಳ್ಳಿ, ತಮ್ಮಡಿಹಳ್ಳಿ, ಕಲ್ಪನಹಳ್ಳಿ, ಹೊಸಳ್ಳಿ, ಕುಮರಿನಾರಾಯಣಪುರ, ಬಾರಂದೂರು, ಹಳ್ಳಿಕೆರೆ, ಬೊಮ್ಮೇನಹಳ್ಳಿ, ಕೆಂಪೇಗೌಡನಗರ, ಕಾರೇಹಳ್ಳಿ, ಕಾಳಿಂಗನಹಳ್ಳಿ ಸೇರಿದಂತೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು