ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ 89ನೇ ದಿಂಡಿ ಮಹೋತ್ಸವ ವಿಜೃಂಭಣೆ ಯಿಂದ ನಡೆಯಿತು. ಸಮಾಜದ ನೂರಾರು ಮಂದಿ ಉತ್ಸವದಲ್ಲಿ ಭಾಗವಹಿಸಿ ಸಂತೃಪ್ತರಾದರು.
ದಿಂಡಿ ಉತ್ಸವ ಆಚರಣೆಯ ಅಂಗ ವಾಗಿ ಹಳೇನಗರದ ಭೂತನಗುಡಿ ಯಲ್ಲಿರುವ ಶ್ರೀ ಕೃಷ್ಣ ರುಕ್ಕಿಣಿ ದೇವಾಲಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ವಿವಿಧ ಬಗೆಯ ಧಾರ್ಮಿಕ ಪೂಜಾ ಕಲ್ಯಾಣ ಕಾರ್ಯಕ್ರಮಗಳು ನಡೆದವು. ಅಂತಿಮ 3ನೇ ದಿನದಂದು ಅಲಂಕೃತ ವಾಹನ ದಲ್ಲಿ ಸಿಂಗರಿಸಿದ ಶ್ರೀ ಕೃಷ್ಣಾ ರುಕ್ಕಿಣಿ ದೇವರ ವಿಗ್ರಹಗಳೊಂದಿಗೆ ಉತ್ಸವವು ಭೂತನಗುಡಿಯ ಶ್ರೀ ದೇವಾಲಯ ದಿಂದ ಹೊರಟು ತರೀಕೆರೆ ರಸ್ತೆ, ಮಾಧವಾಚಾರ್ ವೃತ್ತ, ಬಿ.ಹೆಚ್.ರಸ್ತೆ, ರಂಗಪ್ಪ ವೃತ್ತ ಹಾದು ಸಾರ್ವಜನಿಕ ಆಸ್ಪತ್ರೆಯ ರಸ್ತೆಯ ಮೂಲಕ ರಾಜ ಬೀದಿ ಗಳಲ್ಲಿ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು.
ಮೆರವಣಿಗೆಯಲ್ಲಿ ಸಮಾಜದ ಅಧ್ಯಕ್ಷ ರಾಘವೇಂದ್ರರಾವ್, ಉಪಾಧ್ಯಕ್ಷ ವಸಂತ್ ಕುಮಾರ್, ಮಹಿಳಾ ಅಧ್ಯಕ್ಷೆ ಕಲ್ಪನಾ ಗುಜ್ಜಾರ್, ಮುಖಂಡರಾದ ಡಿ.ಟಿ.ಶ್ರೀಧರ್, ಯೋಗೇಶ್ವರ್‌ರಾವ್ ಸೇರಿದಂತೆ ನೂರಾರು ಮಂದಿ ಮಹಿಳೆ ಯರು ಪುರುಷರು ಸಾಂಪ್ರ ದಾಯಿಕ ಉಡುಪು, ಟೋಪಿ ಧರಿಸಿ ತಾಳ ಮಂಗಳ ವಾದ್ಯದೊಂದಿಗೆ ಲಯಬದ್ಧ ವಾಗಿ ದೇವರ ಭಜನೆಯನ್ನು ಹಾಡುತ್ತಾ ಭಾಗವಹಿ ಸಿದ್ದು ವಿಶೇಷವಾಗಿತ್ತು.
Tags
ಭದ್ರಾವತಿ ಡಿಂಡಿ ಉತ್ಸವ