ಉಗ್ರರ ತವರು ಪಾಕಿಸ್ತಾನ ಸರ್ವನಾಶ ವಾಗಲಿ: ಶ್ರೀವಿಠ್ಠಲಾಚಾರ್ಯ ದೇಶಪಾಂಡೆ

ವಿಜಯ ಸಂಘರ್ಷ ನ್ಯೂಸ್ 

ವಿಜಯಪುರ: ದೇಶ ವಿಭಜನೆ ಯಾದಾಗಿನಿಂದಲೂ ಭಾರತದ ಸ್ವಾಭಿಮಾನವನ್ನು ಒಂದಿಲ್ಲ ಒಂದು ರೀತಿ ಕೆಣಕುತ್ತಿರುವ ಉಗ್ರರ ತವರಾದ ಪಾಪೀ ಪಾಕಿಸ್ತಾನ ಸರ್ವನಾಶ ವಾಗಲಿ ಎಂದು ಶ್ರೀ ವಿಠ್ಠಲಾಚಾರ್ಯ ದೇಶಪಾಂಡೆ ಶಪಿಸಿದರು.

ಶಿಖಾರಖಾನೆಯ ಬಿ.ಕೆ.ಗುಡದಿನ್ನಿ ರಸ್ತೆಯ ಶ್ರೀ ಹನುಮಾನ ಮಂದಿರದಲ್ಲಿ ಭಾರತದ ರಕ್ಷಣೆ.ಸೈನಿಕರ ಮನೋಬಲ ಆತ್ಮ ಸ್ಥೈರ್ಯ ಹೆಚ್ಚಿಸಿ.ಪಾಕಿಸ್ತಾನದ ಶತ್ರು ಸೈನ್ಯವನ್ನು ನಾಶಪಡಿಸಲು ಸರ್ವ ಶಕ್ತ ಹನುಮಂತ ಶಕ್ತಿ ನೀಡಲಿ.ಎಂದು ಶನಿವಾರ ಭಜರಂಗಬಲಿಗೆ ವಿಶೇಷ ಪೂಜೆ. ಪ್ರಾರ್ಥನೆ.ಅಭಿಷೇಕ. ಮಂಗಲಾರ್ಚನೆ ಸಲ್ಲಿಸಿ ಮಾತನಾಡಿದರು.

ಭಾರತ ದೇಶ ಶಾಂತಿ ಸದ್ಭಾವನೆ ಹೊಂದಿದ ರಾಷ್ಟ್ರ. ನಾವು ಯಾರಿಗು ಕೆಡಕು ಬಯಸಿದ ವರಲ್ಲ. ಸರ್ವೇ ಜನಃ ಸುಖಿನೋಭವಂತೂ ಎಂದು ವಿಶ್ವ ಶಾಂತಿಯನ್ನು ಲೋಕ ಕಲ್ಯಾಣ ಕ್ಕಾಗಿ ಪ್ರಾರ್ಥಿಸುವ ಶಾಂತಿ ಪ್ರೀಯರಾದ ಭಾರತೀಯರನ್ನು ಬಲಹೀನರು ಎಂದು ತಿಳಿದು ಇತರರು ನಮ್ಮನ್ನು ದುರುಪ ಯೋಗ ಪಡಿಸಿ ಕೊಳ್ಳಲು ಬಂದರೆ ತಕ್ಕ ಉತ್ತರ ನೀಡಲು ಸದಾ ಸನ್ನದ್ದರು. ಇದನ್ನು ವೈರಿ ರಾಷ್ಟ್ರಗಳು ಇತಿಹಾಸ ವನ್ನು ಅರಿತು ಪಾಠ ಕಲಿಯಬೇಕು. ಇಲ್ಲವಾದಲ್ಲಿ ಭಾರತದೊಂದಿಗೆ ವೈರತ್ವ ಹೊಂದಿ ಯುದ್ಧ ಮಾಡಿ ಸರ್ವನಾಶ ವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ನ್ಯಾಯವಾದಿ ದಾನೇಶ ಅವಟಿ ಮಾತನಾಡಿ ದೇಶದಲ್ಲಿ ಇಂದು ಯುದ್ಧದ ಕಾರ್ಮೋಡ ಕವಿದಿದೆ ಭಾರತ ಪಾಕಿಸ್ತಾನ ಪರಸ್ಪರ ನೇರ ಯುದ್ದಕ್ಕಿಳಿಯುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ವ್ಯಾಪಾರಿ ಬುದ್ಧಿಯ ಅಣ್ವಸ್ತ್ರ ಗಳನ್ನು ತುಬಿಟ್ಟುಕೊಂಡ ಚೀನಾ. ಜಪಾನ್ ಅಮೇರಿಕಾ ಕೊರಿಯಾದಂತಹ ರಾಷ್ಟ್ರಗಳು ಯುದ್ಧವನ್ನು ಪರೋಕ್ಷವಾಗಿ ಬೆಂಬಲಿಸುತ್ತಿವೆ.ಯುದ್ಧವೊಂದೇ ಪರಿಹಾರವಲ್ಲ ಶಾಂತಿ,ಸಹನೆ ಭಾರತೀಯರ ಬಲಹೀನತೆಯಲ್ಲ. ಕಾರಣ ವೈರಿ ರಾಷ್ಟ್ರಗಳಾದ ಚೀನಾ. ಬಾಂಗ್ಲಾ.ಪಾಕಿಸ್ತಾನಗಳು ಪದೇ ಪದೇ ಭಾರತದ ಮೇಲೆ ಕಾಲು ಕೆದರಿ ಕದನಕ್ಕೆ ಬರುತ್ತಿವೆ. ಈಗ ಯುದ್ಧ ಅನಿವಾರ್ಯ ವಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪೂರ್ವ ಸಿದ್ಧತೆಯಿಂದ. ಜಾಗರೂಕತೆಯಿಂದ. ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅಕ್ರಮ ಪಾಕಿಸ್ತಾನಿ ಬಾಂಗ್ಲಾ. ರೊಹಿಂಗ್ಯಾ ವಲಸಿಗರನ್ನು ಮೊದಲು ಹೊರದಬ್ಬಬೇಕು ಇವರಿಂದ ದೇಶಕ್ಕೆ ಗಂಡಾತರವಿದೆ ಎಂದು ತಿಳಿಸಿ. ಭಾರತೀಯರು ಜಾತಿ ಧರ್ಮ ಮತ ಪಾರ್ಟಿ ಪಕ್ಷ ಎಂದು ಕಚ್ಚಾಡದೆ ದೇಶದ ಗೆಲುವಿಗೆ ಅವಕಾಶ ಸಿಕ್ಕರೆ ಗಡಿಯಲ್ಲಿ ಭಾರತದ ಸೈನಿಕರ ಕೈ ಬಲಪಡಿಸಲು ಸೇವೆಗೆ ಸಿದ್ದರಾಗಿರಬೇಕೇಂದು ವಿನಂತಿಸಿದರು.

 ಹಿರಿಯ ಧುರೀಣ ನಿಂಗಪ್ಪ ಸಂಗಾಪುರ ಮಾತನಾಡಿ ಕಾಶ್ಮೀರದ ಪೇಹಲ್ಗಾಮ ದಾಳಿಯಲ್ಲಿ ಪ್ರವಾಸಿಗರು ಈಗ ನಡೆಯುತ್ತಿ ರುವ ಪಾಕಿಸ್ತಾನಿ ಉಗ್ರರ ಮಟ್ಟ ಹಾಕುವ ಅಪರೇಷನ್ ಸಿಂಧೂರ ಕಾರ್ಯಾಚರಣೆ ಯಲ್ಲಿ. ಭಾರತೀಯ ಸೈನಿಕರು ಮೃತರಾಗಿ ದ್ದಾರೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ವರ್ಗದವರಿಗೆ ದುಖಃ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

 ಭಾರತದ ದಿಟ್ಟ ಮಹಿಳೆಯರಾದ ಕರ್ನಲ್ ಸೋಫೀಯಾ ಖುರೇಷಿ. ವಿಂಗ್ ಕಮಾಂಡರ್ ವ್ಯೂಮಿಕಾ ಸಿಂಗ ಅಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ದಿಟ್ಟ ತನದಿಂದ ನಾರಿಶಕ್ತಿ ಪ್ರದರ್ಶಿಸಿ ವೈರಿಗಳನ್ನು ಮಟ್ಟಹಾಕಿ ಹೆಮ್ಮೆಯ ಭಾರತ ಮಾತೆಯ ಪುತ್ರಿಯರೇನಿಸಿದ್ದಾರೆ. ಅವಕಾಶ ಸಿಕ್ಕರೆ ಯುದ್ಧ ರಂಗದಲ್ಲೂ ಭಾರತೀಯ ನಾರಿಯರು ತಕ್ಕ ಉತ್ತರ ನೀಡಲು ಸಿದ್ಧ ಎಂದು ಇತಿಹಾಸ ಮಾಡುವ ಮೂಲಕ ಸಾಬೀತುಪಡಿಸಿ ದ್ದಾರೆ. ಅದರಲ್ಲೂ ಕರ್ನಲ್ ಸೂಫಿಯಾ ಖುರೇಷಿ ಕನ್ನಡ ನಾಡಿನವಳು ಎಂಬುದು ಕನ್ನಡಿಗರಿಗೆ ಹೆಮ್ಮೆಯ ಗರಿ ಮೂಡಿಸಿದೆ.ಅವರಿಗೆ ಹಾಗೂ ಭಾರತದ ಸಮಸ್ತ ವೀರ ಯೋಧರಿಗೆ ಎಲ್ಲ ಭಾರತೀಯರ ಪರವಾಗಿ ಅಭಿನಂದನೆಗಳು ಎಂದು ಶುಭ ಹಾರೈಸಿದರು.

 ಕಾರ್ಯಕ್ರಮವನ್ನು ವಿಜಯಕುಮಾರ್ ಜಾಬಾ, ಗೀತಾ ಜಾಬಾ ಆಯೋಜಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಶ್ವಿನಿ ಅಂಗಡಿ. ಶ್ರೀದೇವಿ ಬಡಿಗೇರ ದೇಶ ಭಕ್ತಿ ಗೀತೆ ಹಾಡಿದರು.

ಈ ಸಂದರ್ಭದಲ್ಲಿ ಶಿವರಾಜ್ ಶಿಂಧೆ. ಅಂಬರೀಷ್ ಇಂಡಿ. ಹುಸೇನ್ ಭಾಷಾ ತಾಸೇವಾಲೆ. ರಾಜು ಕಂಚಿಕೋಟಿ. ಬಸವರಾಜ್ ಅಡಕಿ. ಲಾಲಬಿ ತಸೇವಾಲಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ಮಡೂ ಪಾಟೀಲ್ ನಿರೂಪಿಸಿದರೆ, ವಿಜಯ್ ಲಕ್ಷ್ಮೀ ಸಾಗರ ವಂದಿಸಿದರು. ಕಡೆಯಲ್ಲಿ ಭಾರತ್ ದೇಶದ ಜಯ ಘೋಷಣೆ ಕೂಗಲಾಯಿತು. 

(ವರದಿ ✍️ ರಜಾಕ್ ಸಾಬ್ ಹೊರಕೇರಿ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು