ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಮಾದಾಪುರ ಪ್ರಾಥಮಿಕ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷ ರಾಗಿ ಕೋಟಹಳ್ಳಿ ನಂಜೇಗೌಡ, ಉಪಾಧ್ಯಕ್ಷರಾಗಿ ಗುಡ್ಡೆಹೊಸಹಳ್ಳಿ ಲೋಕೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
12 ನಿರ್ದೇಶಕರ ಬಲ ಹೊಂದಿರುವ ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಬಯಸಿ ಕೋಟಹಳ್ಳಿ ನಂಜೇಗೌಡ ಉಪಾಧ್ಯಕ್ಷ ಸ್ಥಾನ ಬಯಸಿ ಗುಡ್ಡೆಹೊಸಹಳ್ಳಿ ಲೋಕೇಶ್ ಹೊರತುಪಡಿಸಿ ಉಳಿದ ಯಾವ ನಿರ್ದೇಶಕರಿಂದಲೂ ನಾಮಪತ್ರ ಸಲ್ಲಿಕೆಯಾಗದ ಹಿನ್ನಲೆ ಯಲ್ಲಿ ಅಧ್ಯಕ್ಷ -ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದ ಸಿ.ಡಿ.ಓ ಭರತ್ ಕುಮಾರ್ ಘೋಷಿಸಿದರು.
ಸಂಘದ ನಿರ್ದೇಶಕ ಕೋಟಹಳ್ಳಿ ಶ್ರೀನಿವಾಸ್ ಮಾತನಾಡಿ ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತರ ಜೀವನಾಡಿ ಇದ್ದಂತೆ ಇದರಲ್ಲಿ ಯಾರು ಸಹ ರಾಜಕೀಯ ಮಾಡಬಾರದು ಎಂದು ಹಾರಿತುಕೊಂಡು ಸಹಕಾರ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ರಾಜಕೀಯ ದ್ವೇಷ ಚುನಾವಣೆಗೆ ಸೀಮಿತವಾಗಬೇಕು.ಗ್ರಾಮೀಣ ಭಾಗದ ರೈತರ ಸೇವೆ ಮಾಡಲು ಉತ್ತಮ ಜವಾಬ್ದಾರಿ ಹೆಚ್ಚಾಗಿದೆ, ಪಕ್ಷ ಬೇಧ ಮರೆತು ನಿರ್ದೇಶಕರುಗಳನ್ನು ಒಗ್ಗೂಡಿಸಿಕೊಂಡು ಸಂಘದ ಆರ್ಥಿಕತೆ ಯನ್ನು ಹೆಚ್ಚಿಸಿ ರೈತರಿಗೆ ಅನುಕೂಲ ವಾಗುವಂತ ಯೋಜನೆಗಳ ಬಗ್ಗೆ ಅರಿವು ಮೂಡಿಸಿ. ಸಹಕಾರ ಸಂಘದಲ್ಲಿ ರೈತರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ನೆರವಾಗುವಂತಹ ಯೋಜನೆಯನ್ನು ಹೆಚ್ಚು ನೀಡಿದರೆ ಮಾತ್ರ ರೈತರು ಆರ್ಥಿಕವಾಗಿ ಸದೃಢ ರಾಗುವ ಜೊತೆಗೆ ಸಂಘವು ಅಭಿವೃದ್ಧಿ ಯಾಗಲು ಸಾಧ್ಯ, ನಮ್ಮ ಆಡಳಿತ ಅವಧಿಯಲ್ಲಿ ತಾಲೂಕಿಗೆ ಉತ್ತಮ ಸಂಘ ಎಂಬ ಹೆಸರು ಬರುವಂತಹ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಕೆ ನಂಜೇಗೌಡ ನಮ್ಮ ನಾಯಕರಾದ ಶಾಸಕ ಹೆಚ್.ಟಿ ಮಂಜು, ರಾಜ್ಯ ಮಾರಾಟ ಮಹಾ ಮಂಡಳಿ ನಿರ್ದೇಶಕ ಚೋಳೆನಹಳ್ಳಿ ಪುಟ್ಟಸ್ವಾಮಿಗೌಡ ಮುಖಂಡ ಬಿ.ಎಂ ಕಿರಣ್ ನೇತೃತ್ವದಲ್ಲಿ ಹಾಗೂ ಸಂಘದ ಸರ್ವ ನಿರ್ದೇಶಕರ ಸಹಕಾರದಿಂದ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ. ತಾಲೂಕಿನಲ್ಲೆ ಹಿಂದುಳಿದ ಸೊಸೈಟಿ ಯಾಗಿರುವ ನಮ್ಮ ಸೊಸೈಟಿಯನ್ನು ನನ್ನ ಆಡಳಿತ ಅವಧಿಯಲ್ಲಿ ಪಕ್ಷಭೇದ ಮರೆತು ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೊಸೈಟಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ರೈತಾಪಿ ವರ್ಗದ ಏಳಿಗೆಗೆ ಶ್ರಮಿಸಿ,ಆಡಳಿತ ಮಂಡಳಿ ಹಾಗೂ ನೌಕರರು ಹಾಗೂ ಹಿರಿಯರ ಎಲ್ಲರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಘೋಷಣೆ ಹೊರಬೀಳುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯ ಮಾಲೆ ಹಾಕಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಲೋಕೇಶ್ ನಿರ್ದೇಶಕ ರಾದ ಕೃಷ್ಣೇಗೌಡ, ಅಣ್ಣೆಗೌಡ, ಬೈರೇಶ್,ಶಿವೇಗೌಡ,ಸಿ.ಕೆಬಸವರಾಜು,ಪವಿತ್ರ ಬಿ.ಟಿ, ಎಂ.ಕೆ ಸುಮ, ಚಲುವರಾಜುನಾಯ್ಕ, ಮಾದಾಪುರ ಡಾ:ರಾಮಕೃಷ್ಣೇಗೌಡ ಎಂ.ಕೆ, ಮುಖಂಡರಾದ ಹೊನ್ನೇಗೌಡ, ದೇವೇಗೌಡ,ದಿವ್ಯ ಚಂದ್ರಶೇಖರ್, ಶೇಖರ್,ಮಾರ್ಗೋನಹಳ್ಳಿ ಮಂಜುನಾಥ್,ಶಂಕರಣ್ಣ,ಕಾಂತರಾಜು, ಸ್ವಾಮಿ,ಶಂಭಣ್ಣ,ಗೊಂದಿಹಳ್ಳಿ ತೋಪೇಗೌಡ,ಗ್ರಾ.ಪಂ ಮಾಜಿ ಅಧ್ಯಕ್ಷ ಕುಮಾರ್,ಗೂಡೆಹೊಸಹಳ್ಳಿ ಕೃಷ್ಣೇಗೌಡ,ಕಂಡಕ್ಟರ್ ಭೋಜೇಗೌಡ, ಊಗಿನಹಳ್ಳಿ ರೂಪೇಶ್,ಮುರುಳಿ, ಗುಂಡಣ್ಣ,ನಾಗರಾಜು, ರಾಜಶೇಖರ್, ಬಿದರಹಳ್ಳಿ ರಘು,ಅಶೋಕ್, ಪೂ.ಬಸವೇಗೌಡ,ಯೋಗಣ್ಣ,ಪ್ರಸನ್ನ, ಸಂದೀಪ್, ಸಣ್ಣಪ್ಪ,ರವಿ ಮಾದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣೇಗೌಡ,ಜಿ ಪಿ ಮಹೇಶ,ಕೆ.ಆರ್ ಕಾಳೇಗೌಡ,ಯುವ ಮುಖಂಡ ರಾಕೇಶ್, ಅರ್ಜುನ್ ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ