ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕು ಆರೋಗ್ಯಾಧಿ ಕಾರಿಗಳ ಕಛೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಇವರ ಸಹಯೋಗದಲ್ಲಿ ಸೋಮವಾರ ನಗರದ ಹೊಸಮನೆ ಮುಖ್ಯರಸ್ತೆಯ ಹೋಟೆಲ್, ಅಂಗಡಿ ಮುಗ್ಗಟ್ಟುಗಳಿಗೆ ದಾಳಿ ನಡೆಸಿ ಕಾಯ್ದೆಯನ್ನು ಉಲ್ಲಂಘಿ ಸಿದವರಿಗೆ ಮಾಹಿತಿ ನೀಡುವುದರ ಜೊತೆಗೆ ದಂಡ ವಿಧಿಸಲಾಯಿತು.
ಒಟ್ಟು 30 ಪ್ರಕರಣ ದಾಖಲಿಸಿ 3,800 ರೂ ದಂಡ ಸಂಗ್ರಹಿಸ ಲಾಯಿತು. ತಂಡದಲ್ಲಿ ಟಿ ಎಚ್ ಓ ಡಾ:ಎಂ.ವಿ, ಅಶೋಕ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿ ಕಾರಿ ಕೆ.ಸುಶೀಲಾ ಬಾಯಿ, ಸಿಬ್ಬಂದಿ ಗಳಾದ ಆನಂದಮೂರ್ತಿ, ಹರೀಶ್, ಅಲ್ಲಾಉದ್ದೀನ್ ತಾಜ್, ಆಕಾಶ್ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.
Tags
ಭದ್ರಾವತಿ ವರದಿ