ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮನೆಕಳ್ಳತನ ಆರೋಪಿ ಯನ್ನ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ.
ಮೇ.2 ರಂದು ರಾತ್ರಿ ಬಿ.ಎಚ್.ರಸ್ತೆ
ಮೀನುಗಾರರ ಬೀದಿಯ ಮನೆಯೊಂದ ರಲ್ಲಿ ಸಿಮೇಂಟ್ ಶೀಟನ್ನು ಒಡೆದು ಅಂದಾಜು ಮೌಲ್ಯ 1,02,000/- ರೂ ಬೆಲೆಯ ಬಂಗಾರದ ಆಭರಣ, ವಾಚ್ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಪ್ರಕರಣ ದೂರು ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಜಿ. ಕೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ, ಮತ್ತು ಎ. ಜಿ. ಕಾರಿಯಪ್ಪ ರವರ ಮಾರ್ಗದರ್ಶನದಲ್ಲಿ ಭದ್ರಾವತಿ ಉಪ ವಿಭಾಗದ ಡಿವೈಎಸ್ ಪಿ, ಕೆ ಆರ್. ನಾಗರಾಜ ಸಿಪಿಐ ಶ್ರೀಶೈಲ ಕುಮಾರ್ ರವರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಪಿಎಸ್.ಐ. ಟಿ ರಮೇಶ್ ರವರ ನೇತೃತ್ವದ ಸಿಬ್ಬಂದಿಗಳಾದ ಎ.ಎಸ್.ಐ ಟಿ.ಪಿ.ಮಂಜಪ್ಪ, ಸಿ.ಹೆಚ್.ಸಿ ನವೀನ್, ಸಿಪಿಸಿ ನಾಗರಾಜ್ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ತನಿಖಾ ತಂಡವು ಆರೋಪಿಯಾದ ಮೀನುಗಾರರ ಬೀದಿಯ ಜೈಕಾಂತ್ ಪಿ,(21) ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಪ್ರಕಾರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 1,12,000/- ರೂಗಳ 11 ಗ್ರಾಂ 300 ಮಿಲಿ ತೂಕದ ಬಂಗಾರದ ಅಭರಣ, ಒಂದು ವಾಚ್, 2000/- ರೂ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಒಪ್ಪೋ ಮೊಬೈಲ್ ನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.
ತಂಡದ ಉತ್ತಮ ಕಾರ್ಯಕ್ಕೆ ಎಸ್ ಪಿ ಪ್ರಶಂಷಿಸಿ ಅಭಿನಂದಿಸಿರುತ್ತಾರೆ.